ತಾರಸಿಯಲ್ಲಿ ಕಾಳುಮೆಣಸಿನ ಕೃಷಿ
ನೀವು ನಗರದಲ್ಲಿ ನೆಲೆಸಿದ್ದೀರ? ಮನೆಯ ಸುತ್ತಲಿನ ಆವರಣದಲ್ಲಿ ಹೂವಿನ ಗಿಡಗಳು ತುಂಬಿಕೊಂಡಿದೆ. ಟಾರೇಸಿನ ಮೇಲೆ ವಿಶಾಲವಾದ ಜಾಗವಿದ್ದರೂ ಏನೇನು ಮಾಡಲು ಸಾಧ್ಯವಿಲ್ಲ ಎಂಬ ಚಿಂತೆ ಕಾಡುತ್ತಿರಬಹುದು ಅಲ್ವೇ? ನಿಮಗೆ ಆಸಕ್ತಿ, ಛಲ, ಮನಸ್ಸಿದ್ದರೇ ಟಾರಸಿ ಮೇಲಿನ ಸ್ಥಳದಲ್ಲಿಯೂ ಉತ್ತಮವಾಗಿ ಕಾಳುಮೆಣಸಿನ ಕೃಷಿ ಮಾಡಬಹುದು.
ಬುಷ್ ಪೆಪ್ಪರ್ ಸಸ್ಯೋತ್ಪಾದನೆ ಮತ್ತು ಮಾಮೂಲು ಸಸ್ಯೋತ್ಪಾದನೆ ಬಿನ್ನ. ಬುಷ್ ಪೆಪ್ಪರ್ ಎಂದರೆ ಪೊದೆಯಾಕಾರದಲ್ಲಿ ಬೆಳೆಯುವ ಅಂದರೆ ಏರಿ ಬೆಳೆಯದ ಮೆಣಸು. ಇದನ್ನು ಕುಂಡದಲ್ಲೂ ಬೆಳೆಸಬಹುದು. ನೆಲದಲ್ಲೂ ಬೆಳೆಸಬಹುದು. ನೆರಲುಬಲೆ ಹಾಕಿ ನೆಲದಲ್ಲಿ ಬೆಳೆಸಬಹುದು.
ಬುಷ್ ಪೆಪ್ಪರ್ ಮಾಡಲು ಮೆಣಸಿನ ಹಬ್ಬು ಬಳ್ಳಿ ಆಗದು ಕವಲು ಗೆಲ್ಲನ್ನು ಬುಡದ ಗಂಟು ಇರುವಂತೆ ಕತ್ತರಿಸಿ ತೆಗೆದು ತಕ್ಷಣ ಅದರ ಎಲೆಗಳನ್ನು ಕತ್ತರಿಸಿ ತೆಗೆಯಬೇಕು. ಬುಡ ಭಾಗವನ್ನು ಬೇರು ಬರಿಸುವ ಹಾರ್ಮೋನ್ ಪುಡಿಗೆ ತಾಗಿಸಿ ಅದನ್ನು ಸಗಣಿ ಹುಡಿ ಅಥವಾ ತೆಂಗಿನ ನಾರಿನ ಹುಡಿ (ಕೋಕೊಪೆಟ್ ) ತುಂಬಿಸಿದ ಪಾಲಿಥೀನ್ ಚೀಲದಲ್ಲಿ ಊರಬೇಕು. (ಶೇ.1ರ ಹ್ಯೂಮಿಕ್ ಅಸಿಡ್ ದ್ರಾವಣದಲ್ಲಿ ಮುಳುಗಿಸಿ ತೇವಾಂಶ ಕೊಡಿ) ಒಂದು ಕೋಲನ್ನು ಊರಿ ಅದಕ್ಕೆ ಒಂದು ಪಾಲಿಥೀನ್ ಕೊಟ್ಟೆ ಯನ್ನು ಮುಚ್ಚಿ. (ಕೋಲು ಊರಿದಾಗ ಮುಚ್ಚಿದ ಪಾಲಿಥೀನ್ ಕೊಟ್ಟೆ ಗಿಡಕ್ಕೆ ತಾಗಲಾರದು). ಬುಡದ ಪಾಲಿಥೀನ್ ಚೀಲಕ್ಕೂ ಬರುವಂತೆ ರಬ್ಬರ್ ಬ್ಯಾಂಡ್ ನಲ್ಲಿ, ಇಲ್ಲವೇ ಹಗ್ಗದಲ್ಲಿ ಗಾಳಿಯಾಡದಂತೆ ಬಿಗಿಯಾಗಿ ಕಟ್ಟಿ. ಅದನ್ನು ನೆರಳಿನಲ್ಲಿ ಇಡಿ.ಮೇಲೇ ಪಾಲಿಥೀನ್ ಚೀಲ ಹೊದಿಸಿದ ಕಾರಣ 10 ದಿನಗಳಾದರೂ ತೇವಾಂಶ ಆರುವುದಿಲ್ಲ. ಇದನ್ನು ಗಮನಿಸಿ ಅಗತ್ಯ ಇದ್ದರೆ ನೀರಾವರಿ ಮಾಡಿ . ಸೂಮಾರು 25-30 ದಿನಕ್ಕೆ ಬೇರು ಬಿಟ್ಟು ಚಿಗುರು ಬರುತ್ತದೆ. ಎಲೆ ಮೂಡಿರುವುದು ಮತ್ತು ಬೇರು ಬಂದಿರುವುದು ಖಾತ್ರಿಯಾದ ಮೇಲೆ ಹೊದಿಸಿದ ಪಾಲಿಥೀನ್ ಕೊಟ್ಟೆಯನ್ನು ತೆಗೆದು ನೆರಲಿನಲ್ಲಿ ಇಟ್ಟು ಸರಿಯಾಗಿ ಚಿಗುರುವವರೆಗೆ ಪೋಷಿಸಬೇಕು. ಪ್ರತೀ ಗೆಲ್ಲಿನಲ್ಲಿ 2-3 ಎಲೆ ಬಂದ ನಂತರ ನಾಟಿ ಮಾಡಬಹುದು. ಈ ಗಿಡ ಆರು ತಿಂಗಳ ನಂತರ ಹೂ ಕರೆ ಬಿಡಲು ಪ್ರಾರಂಭವಾಗುತ್ತದೆ. ಗಿಡ ಬೆಳೆದಂತೆ ಹೆಚ್ಚುತ್ತದೆ. ವರ್ಷದಲ್ಲಿ 2 ಬಾರಿ ಹೂ ಬಿಡುತ್ತದೆ.
ಹೆಚ್ಚಿನ ಮಾಹಿತಿಗೆ ಕೆಳಗೆ ಕಾಮೆಂಟ್ ಮಾಡಿ
No comments:
Post a Comment