ಮೆಣಸಿನ ಕಾಯಿ ಸುಧಾರಿತ ಬೇಸಾಯ ಕ್ರಮಗಳು



ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಮೆಣಸಿನಕಾಯಿ ಒಂದು ಸಾಂಬಾರ ಬೆಳೆಯಾಗಿ ಪ್ರಸಿದ್ದಿ ಹೊಂದಿದೆ. ಪ್ರಸ್ತುತ ಮೆಣಸಿನಕಾಯಿ ಉತ್ಪಾದನೆಯಿಂದ ಸಾಕಷ್ಟು ವಿದೇಶಿ ಲಭಿಸುತ್ತಿರುವುದು ಗಮನಾರ್ಹ. ಸುಮಾರು  700 ವರ್ಷಗಳ ಹಿಂದೆ ರೆಡ್ ಇಂಡಿಯನ್ನರು ಮೆಣಸಿನಕಾಯಿಯನ್ನು ಬಳಸುತ್ತಿದ್ದರು. 'ಚಿಲ್ಲಿ' ಎಂಬ ಶಬ್ದವು ಮೆಕ್ಸಿಕೋ ದೇಶದ 'ನೌಹಾಟ್ಲಿ' ಎಂಬ ಭಾಷೆಯಿಂದ ಬಂದಿದೆಯೆಂದು ಹೇಳಲಾಗಿದೆ. ಕೊಲಂಬಸನು 1492 ರಲ್ಲಿ ಮೆಣಸಿನಕಾಯಿಯನ್ನು ಜಗತ್ತಿಗೆ ಪರಿಚಯಿಸಿದನು. ದಕ್ಷಿಣ ಮತ್ತು ಮಧ್ಯ ಅಮೆರಿಕ,ಮೆಕ್ಸಿಕೋ, ಪೆರು, ಬೊಲಿವಿಯಾ ಮುಂತಾದ ದೇಶಗಳು ಮೆಣಸಿನಕಾಯಿಯ ತವರು ಮನೆ ಎನಿಸಿವೆ.
ರಾಜ್ಯದಲ್ಲಿ ಮೆಣಸಿನ ಕಾಯಿ  ಪ್ರಮುಖ ವಾಣಿಜ್ಯ   ಸಾಂಬಾರ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮುಖ್ಯವಾಗಿ ಈ ಬೆಳೆಯಲನ್ನು ಬೆಳಗಾವಿ, ಧಾರವಾಡ, ಗುಲ್ಬರ್ಗ, ಶಿವಮೊಗ್ಗ, ಕೋಲಾರ, ಮೈಸೂರು, ಚಿತ್ರದುರ್ಗ  ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.

ಮಣ್ಣು ಮತ್ತು ಹವಾಗುಣ 

ನೀರು ಚೆನ್ನಾಗಿ ಬಸಿದು ಹೋಗುವ ಫಲವತ್ತಾದ ಗೋಡುಮಣ್ಣು ಮೆಣಸಿನ ಬೆಳೆಗೆ ಸೂಕ್ತ. ಆದರೂ ಮರಳು ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣಿನಲ್ಲಿಯೂ ಉತ್ತಮವಾಗಿ ಬೆಳೆಯುತ್ತದೆ.

ಹವಾಗುಣ
    * ಮೆಣಸಿನ ಕಾಯಿ ಉಷ್ಟ್ಣ  ಮತ್ತು ಸಮಶೀತೋಷ್ಟ್ಣ ವಲಯದ ಬೆಳೆಯಾಗಿದೆ.
* ಸಮುದ್ರ ಮಟ್ಟದಿಂದ ಸುಮಾರು  1500 ಮೀ. ಎತ್ತರದ ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.
* ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಈ ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು.
* ಈ ಬೆಳೆಗೆ ವಾರ್ಷಕವಾಗಿ 600 ರಿಂದ  1200 ಮೀ.ಮೀ. ಮಳೆಯ ಅವಶ್ಯಕತೆಯಿದೆ.

ಬಿತ್ತನೆ

ಬಿತ್ತನೆಯ ಕಾಲವನ್ನು 3 ಗುಂಪುಗಳನ್ನಾಗಿ ವಿಂಗಡಿಸಬಹುದು.
   1. ಮೇ-ಜೂನ್(ಮಳೆಯಾಶ್ರಿತ )   
   2. ಅಕ್ಟೋಬರ್-ನವೆಂಬರ್ (ನೀರಾವರಿ )
   3. ಜನವರಿ-ಫೆಬ್ರವರಿ (ನೀರಾವರಿ )

ತಳಿಗಳು

ಬ್ಯಾಡಗಿ
ಸಂಕೇಶ್ವರ
ಚಿಂಚೋಳಿ
ಮೈಸೂರು
ಗೌರೀಬಿದನೂರು

     ಸುಧಾರಿತ ತಳಿಗಳು 
  ಎನ್.ಪಿ. 46 ಎ
  ಪೂಸಾ-ಜ್ವಾಲಾ
  ಜಿ-3
  ಜಿ-4
  ಡಿ ಹೆಚ್ 7-6-7

    ಒಂದು ಹೆಕ್ಟೇರಿಗೆ ಬೇಕಾಗುವ ಸಾಮಾಗ್ರಿಗಳು.
* ಬಿತ್ತನೆ ಬೀಜ        -  1250 ಗ್ರಾಂ
*ಕೊಟ್ಟಿಗೆ ಗೊಬ್ಬರ  -  25-30 ಟನ್

ರಸಗೊಬ್ಬರ      ಸಾರಜನಕ  ರಂಜಕ  ಪೊಟ್ಯಾಷ್
ನೀರಾವರಿಯಲ್ಲಿ 150:          75:       75 ಕೆ.ಜಿ
ಖುಷ್ಕಿಯಲ್ಲಿ        100:         50        50 "

      ಸಸಿಮಡಿ ತಯಾರಿಕೆ
* ಸಸಿ ಮಡಿ ಮಾಡಬೇಕಾದ ಪ್ರದೇಶವನ್ನು ಆಳವಾಗಿ 2-3 ಬಾರಿ ಉಳುಮೆ ಮಾಡಬೇಕು.
* ಹೆಂಟೆಗಳನ್ನು ಒಡೆದು, ಭೂಮಿಯನ್ನು ಸಮತಟ್ಟಾಗಿ ಮಾಡಬೇಕು.
* ಸಸಿಗಳನ್ನು ಸಿದ್ದ ಪಡಿಸಲು 750 ಸೇಂ.ಮೀ. ಉದ್ದ ಹಾಗೂ 120 ಸೇಂ. ಮೀ. ಎತ್ತರದ ಸಸಿಮಡಿಗಳನ್ನು ಸಿದ್ದಪಡಿಸಿಕೊಳ್ಳಬೇಕು.
* 30 ಕೆ.ಜಿ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ, 1/2 ಕೆ.ಜಿ. ಸಂಯುಕ್ತ ಗೊಬ್ಬಲವನ್ನು ಪ್ರತೀ ಮಡಿಗೂ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೇಸಬೇಕು.
* ಬೇಸಿಗೆಯಲ್ಲಿ ಮೊಳಕೆ ಬರುವವರೆಗೂ ನೆರಳನ್ನು ಒದಗಿಸಬೇಕು.
* ಪ್ರತಿನಿತ್ಯ ಸಾಯಂಕಾಲ ನೀರು ಹಾಯಿಸಬೇಕು.
* ಬಿತ್ತನೆ ಮಾಡಿದ ಬೀಜಗಳು ಒಂದು  ವಾರದಲ್ಲಿ ಮೊಳಕೆಯೊಡೆದು 4-6 ವಾರಗಳಲ್ಲಿ ನಾಟಿಗೆ ಸಿದ್ದವಾಗುತ್ತದೆ.
 * ಭೂಮಿಯನ್ನು ಆಳವಾಗಿ 2-3 ಬಾರಿ ಉಳುಮೆ ಮಾಡಬೇಕು.
* ಹೆಕ್ಟೇರಿಗೆ ಬೇಕಾದ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು.
* ನಂತರ  75 ಸೆಂ.ಮೀ. ಅಂತರದ ಬದುಗಳನ್ನು ಮಾಡಿ, ಇದಕ್ಕೆ ಶಿಫಾರಸಿನ ಸಾರಜನಕ, ರಂಜಕ, ಪೊಟ್ಯಾಷ್ ಮಿಶ್ರಣ ಮಾಡಿ , ತೆಳುವಾಗಿ ನಿರು ಹಾಯಿಸಬೇಕು.

         ಖುಷ್ಕಿ ಬೇಸಾಯ
 * ಸಸಿಮಡಿ ಹಾಗೂ ಸಿದ್ದಪಡಿಸುವುದಕ್ಕಾಗಿ ಸೂಕ್ತ ಕ್ರಮಗಳನ್ನು ಅನುಸರಿಸಿ.
* ಕಪ್ಪು ಭೂಮಿಯಲ್ಲಿ  90×90 ಸೇಂ.ಮೀ.
* ಕೆಂಪು ಭೂಮಿಯಲ್ಲಿ  60×60 ಸೆಂ. ಮೀ. ಅಂತರ.
  ಈ ಪ್ರಕಾರ ಗುರುತು ಮಾಡಿದ ಭಾಗದಲ್ಲಿ ಕೊಟ್ಟಿಗೆಗೊಬ್ಬರ, ಅರ್ಧ ಭಾಗ ಸಾರಜನಕ, ರಂಜಕ, ಪೊಟ್ಯಾಷ್  ಗೊಬ್ಬರಗಳನ್ನು ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು.
* ಪ್ರತಿ ಗುಣಿಗೂ 2 ಸಸಿಗಳಂತೆ ನಾಟಿ ಮಾಡಬೇಕು.
* ನೆಟ್ಟ 2-3 ವಾರಗಳ ನಂತರ ಉಳಿದ ಸಾರಜನಕ, ರಂಜಕ, ಪೊಟ್ಯಾಷ್ ಗಳನ್ನು ಮೇಲು ಗೊಬ್ಬರವಾಗಿ ಹಾಕಬೇಕು.

         ನೀರಾವರಿ - ಅಂತರ ಬೇಸಾಯ
* ಮಣ್ಣು ಹಾಗೂ ಹವಾಗುಣಕ್ಕನುಸಾರವಾಗಿ 8-10 ದಿನಗಳಿಗೊಮ್ಮೆ ನೀರು ಹಾಯಿಸಿ ಮೇಲು ಗೊಬ್ಬರ ಹಾಕಬೇಕು.
* ನಂತರ ಮಣ್ಣು ಏರುಹಾಕಿ, ಭೂಮಿಯನ್ನು ಕಳೆಗಳಿಂದ ಮುಕ್ತಮುಕ್ತಗೊಳಿಸಬೇಕು.

   ಕೊಯ್ಲು ಮತ್ತು ಇಳುವರಿ
* ನಾಟಿ ಮಾಡಿದ  45-50 ದಿನಗಳ ನಂತರ ಹಸಿ ಮೆಣಸಿನಕಾಯಿ ಬಿಡಲು ಪ್ರಾರಂಭಿಸುತ್ತದೆ.
* 85-95 ನಂತರ  ಹಣ್ಣಾದ ಕಾಯಿಗಳನ್ನು ಕೊಯ್ಲು ಮಾಡಬಹುದು.

     ಇಳುವರಿ ಪ್ರತಿ ಹೆಕ್ಟೇರಿಗೆ
                                ಖುಷ್ಕಿ(ಕ್ವಿ.)        ನೀರಾವರಿ
ಹಸಿಮೆಣಸು             75 - 100           200-250
ಒಣಮೆಣಸು             7 - 10               20 - 25



1 comment: