ಗೇರು ಬೆಳೆಗೆ ಹೂ ಬಿಡುವ ಸಮಯದಲ್ಲಿ ಹೂವು ಒಣಗಿ ಹೋಗುವುದು ದೊಡ್ಡ ನಷ್ಟ. ಸಾಮಾನ್ಯವಾಗಿ ಒಂದು ಹೂ ಗೊಂಚಲಿನಲ್ಲಿ 100ಕ್ಕೂ ಹೆಚ್ಚಿನ ಹೂ ಇದ್ದರೂ ಅದರಲ್ಲಿ 10% ಕಾಯಿಯಾಗುತ್ತದೆ. ಕೆಲವೆಡೆ ಅದು 2-3% ಆಗುವುದೂ ಇದೆ. ಹೂವು ಒಣಗುವುದಕ್ಕೆ ಕಾರಣ ಮೋಡ ಕವಿದ ವಾತಾವರಣ, ಮೋಡಕ್ಕೆ ಹೂ ಕರಟುತ್ತದೆ ಎಂದು ಜನ ತಿಳಿದಿದ್ದಾರೆ. ಆದರೆ ಮೋಡಕ್ಕೆ ಹೂ ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ರಸ ಹೀರುವ ಟಿ ಸೊಳ್ಳೆಯ ಚಟುವಟಿಕೆ ಜಾಸ್ತಿಯಾದ ಕಾರಣ ಹೂವು ಒಣಗುತ್ತದೆ.
ಹೊವು ಒಣಗವುದು ಎಲ್ಲವೂ ಟಿ ಸೊಳ್ಳೆಯ ಉಪಟಳದಿಂದ. ಹೊ ಗೊಂಚಲಿನಲ್ಲಿ ಗಂಡು ಮತ್ತು ದ್ವಿಲಿಂಗ ಹೂವುಗಳಿದ್ದು, ಅದರ ಅನುಪಾತ ಸುಮಾರಾಗಿ 90:10 ರಷ್ಟು ಇರುತ್ತದೆ. ಹೆಣ್ಣು ಹೂಗಳು ಮಾತ್ರ ಫಲಿತವಾಗಿ ಕಾಯಿ ಕಟ್ಟುತ್ತದೆ. ಗಂಡು ಹೂಗಳು ಒಣಗುತ್ತವೆ. ಹೆಣ್ಣು + ಗಂಡು ಹೂಗಳ ಪ್ರಮಾಣ ಹೆಚ್ಚು ಇದ್ದಷ್ಟು ಕಾಯಿ ಕಟ್ಟುವಿಕೆ ಪ್ರಮಾಣ ಹೆಚ್ಚು. ಗೇರಿನಲ್ಲಿ ಹೆಣ್ಣು ಹೂವೆಂದು ನಾವು ಹೇಳುವಂತದ್ದು ದ್ವಿಲಿಂಗ ಹೂವಾಗಿರುತ್ತದೆ. ಇದರಲ್ಲಿ ಗಂಡು ಹೆಣ್ಣು (ಪರಾಗ ಮತ್ತು ಶಾಲಾಕಾಂಗ polan and stigma) ಗಳೆರಡೂ ಇರುತ್ತದೆ. ಆದರೆ ಆದಾಗಿ ಕಾಯಿ ಕಚ್ಚಿಕೊಳ್ಳುವುದಿಲ್ಲ. ಪ್ರಕೃತಿಯ ವೈಚಿತ್ರ್ಯವೆಂದರೆ ದ್ವಿಲಿಂಗ ಹೂವಿನಲ್ಲಿ ಗಂಡು ಭಾಗ ಕೆಳಗೂ,ಹೆಣ್ಣು ಭಾಗ ಮೇಲೂ ಇರುತ್ತದೆ. ಅದಕ್ಕೆ ಗಂಡು ಹೂವಿನ ಪರಾಗ ಮಿಶ್ರ ಪರಾಗಸ್ಪರ್ಶದ ಮೂಲಕ ಆಗಲೇ ಬೇಕು. ಪರಾಗಸ್ಪರ್ಶದ ನಂತರ ಆ ಹೂವು ಒಣಗುತ್ತದೆ. ದ್ವಿಲಿಂಗ ಹೂವುಗಳೇ ಇಲ್ಲದಿರುವ ಪಕ್ಷದಲ್ಲಿ ಹೂ ಗೊಂಚಲೇ ಒಣಗುತ್ತದೆ.
ಕೆಲವು ತಳಿಗಳಲ್ಲಿ ಗಂಡು ಹೂಗಳ ಪ್ರಮಾಣ ಜಾಸ್ತಿ ಇರಬಹುದು. ತಳಿ ಗುಣವಲ್ಲದೆ ಮರದ ಆರೋಗ್ಯದ ಮೇಲೂ ಗಂಡು ಹೆಣ್ಣು ಹೂಗಳ ಅನುಪಾತ ಹೆಚ್ಚು ಕಡಿಮೆ ಆಗುತ್ತದೆ. ಸರಿಯಾದ ಪೋಷಕಾಂಶ ಹೊಂದಿರುವ ಮಣ್ಣಿನಲ್ಲಿ ಬೆಳೆದ ಮರದಲ್ಲಿ ಹೆಣ್ಣು ಹೂಗಳ ಪ್ರಮಾಣ ಸ್ವಲ್ಪ ಜಾಸ್ತಿ ಇರುತ್ತದೆ. ಏನೇನೂ ಪೋಷಕಾಂಶ ಇಲ್ಲದ ಮಣ್ಣಿನಲ್ಲಿ ಬೆಳೆದ ಮರದ ಹೂ ಗೊಂಚಲಿನಲ್ಲಿ ಗಂಡು ಹೂಗಳ ಪ್ರಮಾಣ ಅಧಿಕ ಇರುವುದೂ ಇದೆ.
ಆದ ಕಾರಣ ಹೂ ಒಣಗುವುದಕ್ಕೆ ಟಿ ಸೊಳ್ಳೆ ಒಂದೇ ಕಾರಣ ಅಲ್ಲ. ಹೂಗಳ ಅನುಪಾತ, ಪೋಷಕಾಂಶ, ಸೂರ್ಯನ ಬೆಳಕು, ಅದರ ದಿಕ್ಕು, ಗಾಳಿ ಪರಾಗಸ್ಪರ್ಶಕ್ಕೆ ಕಾರಣ. ವ್ಯವಸ್ಥಿತವಾಗಿ ಗೊಬ್ಬರ ಕೊಟ್ಟು , ನೀರಾವರಿ ಮಾಡಿ, ಬೆಳೆದ ಮರದಲ್ಲಿ ಹೆಣ್ಣು ಹೂಗಳು ಹೆಚ್ಚಳವಾಗುವ ಸಾದ್ಯತೆ ಇದೆ. ಹೆಚ್ಚಿಗೆ ಇರುವ ಮಿಡಿಗಳು ಪುಷ್ಠಿಯಾಗಿ ಬೆಳೆಯಲು ಇದು ಸಹಕಾರಿ. ನೀರು, ಪೋಷಕಾಂಶ ಎಲ್ಲದರ ಕೊರತೆ ಇರವ ಕಡೆ ಕಾಯಿಗಳೂ ಸಮರ್ಪಕವಾಗಿ ಬೆಳೆಯದೆ,ಕೀಟ ಬಾಧೆಗೂ ಬೇಗ ತುತ್ತಾಗುತ್ತದೆ.
No comments:
Post a Comment