ಕೃಷಿಸಾಲ ಎನ್ನುವುದು ಆಧುನಿಕ ಕೃಷಿಯ ಕೂಸು. ರೈತರಿಗೆ ಅಗತ್ಯವಾದ ಮೂಲಭೂತ ಸಾಮಗ್ರಿಗಳೆಂದರೆ ಬೀಜ ಮತ್ತು ಗೊಬ್ಬರ. ಇವೆರಡರಲ್ಲೂ ನಮ್ಮ ರೈತರು ಸ್ವಾವಲಂಬಿಗಳೆ ಆಗಿದ್ದರು. ಒಂದೇ ಬೆಳೆಯಲ್ಲೇ ಹಲವಾರು ತಳಿವೈವಿಧ್ಯತೆಗಳಿದ್ದವು. ಪ್ರಾದೇಶಿಕ ಹವಾಮಾನಕ್ಕೆ, ಭೂಮಿಯ ಗುಣಧರ್ಮಕ್ಕೆ ಅನುಗುಣವಾಗಿ ಅವುಗಳ ಬಳಕೆ ಇತ್ತು. ರೈತರ ಎದುರು ಶ್ರೇಷ್ಠತೆಯ ಆಯ್ಕೆಯನ್ನಿಟ್ಟು ಪುಸಲಾಯಿಸಿದ್ದೆ ಹಸಿರುಕ್ರಾಂತಿ. ಈ ಶ್ರೇಷ್ಟತೆಯ ವ್ಯಸನದಲ್ಲಿ ವಿವಿಧ ಬೆಳೆಗಳ ಬಹುಮೂಲ್ಯವಾದ ವೈವಿಧ್ಯಮಯ ತಳಿಗಳೇ ಕಣ್ಮರೆಯಾದವು. ಗೊಬ್ಬರದ ವಿಷಯಕ್ಕೆ ಬಂದರೆ, ಪಶು ಸಂಗೋಪನೆ ಎನ್ನುವುದು ನಮ್ಮ ಕೃಷಿಯ ಅವಿಭಾಜ್ಯ ಅಂಗವೆ ಆಗಿತ್ತು. ರೈತರು ತಮ್ಮ ತಮ್ಮ ಜಮೀನಿನ ಪ್ರಮಾಣಕ್ಕನುಗುಣವಾಗಿ ದನಕರುಗಳನ್ನು ಸಾಕುತಿದ್ದರು. ಆ ಮೂಲಕವೆ ಅವರ
ಬೀಜೋತ್ಪಾದನೆಯ ತಾಂತ್ರಿಕತೆಯನ್ನು ತರಬೇತಿ ಮೂಲಕ ನೇರವಾಗಿ ರೈತರಿಗೆ ತಲುಪಿಸಿದ್ದರೆ ನಮ್ಮ ರೈತರೆ ಬೀಜೋತ್ಪಾದಕರೂ ಆಗಿರುತಿದ್ದರು. ತಳಿವೈವಿಧ್ಯತೆ ಕಾಪಾಡಿಕೊಳ್ಳುವುದರ ಮೂಲಕ ನಾವು ಬೀಜ ಸಾರ್ವಭೌಮತೆಯನ್ನೂ ಉಳಿಸಿಕೊಳ್ಳುತಿದ್ದೆವು. ಇಲ್ಲವೇ, ಗ್ರಾಮಮಟ್ಟದಲ್ಲೇ ಐದಾರು ಎಕರೆ ವಿಸ್ತೀರ್ಣದಲ್ಲಿ ಕೃಷಿಶಾಲೆಗಳನ್ನು ತೆರೆದು ಅಲ್ಲೇ ರೈತರಿಗೆ ಸೂಕ್ತ ತರಬೇತಿ ಮತ್ತು ಜಾಗೃತಿ ಮೂಡಿಸಬಹುದಿತ್ತು. ಅಲ್ಲದೇ ಬೀಜೋತ್ಪಾದನೆಯನ್ನೂ ಕೈಗೊಳ್ಳಬಹುದಿತ್ತು. ಬೀಜೋತ್ಪಾದನೆಯ ಕೆಲಸವನ್ನು ಬೀಡುಬೀಸಾಗಿ ಬಹುರಾಷ್ಟ್ರೀಯ ಕಂಪನಿಗಳ ಸುಪರ್ದಿಗೆ ಬಿಟ್ಟು ಕೈಕಟ್ಟಿದ ಪರಿಣಾಮವೆ ಇಂದು ನಾವು ಬೀಜಭಿಕ್ಷುಕರಾಗಬೇಕಾಗಿ ಬಂದಿದೆ. ರೈತರು ಬೀಜ ಗ್ರಾಹಕರಾಗಬೇಕಾಗಿದೆ.
ರಸಾಯನಿಕ ಕೃಷಿ ಸುಸ್ಥಿರ ಕೃಷಿ ಅಲ್ಲವೆಂಬುದು ಜಗತ್ತಿನ ವಿವಿಧೆಡೆ ಮನದಟ್ಟಾಗುತ್ತಿರುವ ಹೊತ್ತಿನಲ್ಲೆ ನಾವು ಹಸಿರುಕ್ರಾಂತಿಯ ಅಖಾಡಕ್ಕೆ ಇಳಿಯುವ ಹುಮ್ಮಸ್ಸಿನಲ್ಲಿದ್ದೆವು. ಇಲ್ಲಿ ಹಸಿರು ಕ್ರಾಂತಿ ಆರಂಭಗೊಳ್ಳುತ್ತಿರುವ ಸಂದರ್ಭದಲ್ಲೇ ಜಪಾನಿನಲ್ಲಿ ಮಸಾನೋಬು ಫುಕುವೋಕಾ ಅವರು ಸಹಜ ಕೃಷಿಯ ಪ್ರಯೋಗಗಳಲ್ಲಿ ಯಶಸ್ಸು ಸಾಧಿಸಿದ್ದರು. ಹೀಗಿರುವಾಗ ನಾವು ರಸಗೊಬ್ಬರಕ್ಕೆ ಮುಕ್ಕಾಲು ಭಾಗ ಸಹಾಯಧನ ಕೊಡುವ ಬದಲು ನಮ್ಮ ರೈತರ ಪಶುಸಂಗೋಪನೆಗೆ ವಿವಿಧ ರೀತಿಯ ನೆರವು ನೀಡಬಹುದಿತ್ತಲ್ಲವೇ?
ಹಾಗೆ ನೋಡಿದರೆ, ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೆ ರಸಾಯನಿಕ ಕೃಷಿಗೆ ಬುನಾದಿ ಹಾಕಲಾಗಿತ್ತು. ಅದಕ್ಕೆಂದೆ ತಮಿಳುನಾಡಿನ ರಾಣಿಪೇಟದಲ್ಲಿ 1906ರಲ್ಲೆ ರಸಾಯನಿಕ ಗೊಬ್ಬರ ಕಾರ್ಖಾನೆ ಸ್ಥಾಪನೆಯಾಗಿತ್ತು. ಬಹುಶಃ ಈ ಕಾರಣಕ್ಕಾಗಿಯೇ ಗಾಂಧೀಜಿ ಅವರು ರಸಾಯನಿಕ ಕೃಷಿಗೆ ಆಗಲೇ ವಿರೋಧ ವ್ಯಕ್ತಪಡಿಸಿದ್ದು ಅನಿಸುತ್ತದೆ. ಗಾಂಧೀಜಿ ಅವರ ಅನುಯಾಯಿಯೂ, ಅರ್ಥಶಾಸ್ತ್ರಜರೂ ಆಗಿದ್ದ ಜೆ ಸಿ. ಕುಮಾರಪ್ಪ ಆಗಲೇ ರಸಾಯನಿಕ ಗೊಬ್ಬರದ ಬದಲಾಗಿ ಕೃಷಿಯಲ್ಲಿ ಹಸಿರೆಲೆ ಗೊಬ್ಬರದ ಬಳಕೆಯ ಕುರಿತಂತೆ ಪ್ರಯೋಗ ನಡೆಸಿದ್ದರು.
ಹಸಿರುಕ್ರಾಂತಿಯ ಅಧ್ವರ್ಯುಗಳಿಗೆ ಕನಿಷ್ಠ ಈ ಬಗ್ಗೆಯಾದರೂ ಒಂದಿಷ್ಟು ಒಳನೋಟಗಳಿದ್ದಿದ್ದರೆ ಭಾರತೀಯ ಕೃಷಿ ಇವತ್ತಿನ ಈ ಅಧೋಗತಿಯಿಂದ ಪಾರಾಗುತ್ತಿತ್ತೇನೋ. ಹಸಿವಿನಂಥ ಭೀಕರ ಸಂಕಷ್ಟದಿಂದ ದೇಶವನ್ನು ಪಾರು ಮಾಡುವ ಒತ್ತಡದಲ್ಲಿ ಗಾಂಧೀಜಿಯವರ ಗ್ರಾಮಸ್ವರಾಜ್ಯ ದ ಕಲ್ಪನೆ ಮೂಲೆಗುಂಪಾಯಿತು. ಪರಿಣಾಮ ಎಲ್ಲದಕ್ಕೂ ಪಟ್ಟಣಗಳನ್ನೆ ಅವಲಂಬಿಸಿ ಕೇವಲ ಆಹಾರೋತ್ಪನ್ನಗಳನ್ನು ಉತ್ಪಾದಿಸಿ ಮತ್ತೆ ಅಲ್ಲಿಗೆ ರವಾನಿಸುವ ತಾಣಗಳಾಗಿ ನಮ್ಮ ಹಳ್ಳಿಗಳು ರೂಪಾಂತರಗೊಂಡವು. ಕೃಷಿಯೇ ಪರಾವಲಂಬಿಯಾದ ಕಾರಣ ಕೃಷಿಕನೂ ಪರಾವಲಂಬಿಯಾದ. ಕೃಷಿಯನ್ನೆ ಅವಲಂಬಿಸಿದ್ದ ಬಹುತೇಕ ಕೃಷಿಕಾರ್ಮಿಕರು ನಗರಗಳತ್ತ ವಲಸೆ ಹೋದರು. ಅದನ್ನೆ ನಂಬಿದವರು ಬಡತನದಲ್ಲಿಯೆ ಬೆಂದು ಬದುಕಿದರು.
ರಸಾಯನಿಕ ಗೊಬ್ಬರ ಕೊಳ್ಳುವ ಶಕ್ತಿ ನಮ್ಮ ರೈತರಿಗೆ ಇಲ್ಲವೆಂದೆ ಸರ್ಕಾರ ಸಹಾಯಧನ ನೀಡಿತು. ನಮ್ಮ ರೈತರು ಒಮ್ಮೆಲೆ ಇದನ್ನು ಒಪ್ಪಿ ಅಪ್ಪಲಿಲ್ಲ. ಅದಕ್ಕೂ ದಶಕಗಳ ಕಾಲ ಕಾಯಬೇಕಾಯ್ತು. ಕೃಷಿ ಇಲಾಖೆ, ಕೃಷಿ ವಿ.ವಿ.ಗಳ ಮಾರ್ಗದರ್ಶನ ಮತ್ತು ಬಾನುಲಿ ಪ್ರಚಾರದ ಮೂಲಕ ಆಧುನಿಕ ಕೃಷಿ ರೈತರನ್ನು ತಲುಪುವಲ್ಲಿ ಸಫಲವಾಯಿತು. 1980/90ರ ದಶಕಗಳಲ್ಲಿ ಈ ದಿಶೆಯಲ್ಲಿ ಬಹಳಷ್ಟು ಪರಿವರ್ತನೆ ಕಂಡುಬಂತು. ಹಸಿರುಕ್ರಾಂತಿ ಸಫಲವಾಗಿ ಆಹಾರ ಭದ್ರತೆಯ ಹೊಸ್ತಿಲಲ್ಲಿರುವಾಗಲೇ ಜಾಗತೀಕರಣ ಹೊಸ್ತಿಲೊಳಗೇ ಬಂದಿತು. ಅಲ್ಲಿಗೆ ರಸಗೊಬ್ಬರಗಳ ಸಹಾಯಧನಕ್ಕೆ ಮತ್ತೆ ಕತ್ತರಿ.
ಒಟ್ಟಾರೆಯಾಗಿ ಯೋಚಿಸಿದಾಗ ನಮ್ಮನ್ನು ಆಳುವವರು ನಮ್ಮವರೋ ಅಥವಾ ವಿದೇಶಿಯರೋ ಎಂಬ ಅನುಮಾನ ಬಾರದಿರದು. ಕಾಲಕಾಲಕ್ಕೆ ನಮ್ಮ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು ಬಹುತೇಕ ಬಾಹ್ಯ ಒತ್ತಡಕ್ಕೆ ಮಣೆ ಹಾಕಿದಂತೆಯೆ ಇವೆ. ಆ ಸಂದರ್ಭದಲ್ಲೆಲ್ಲ ಇಲ್ಲಿನ ರೈತರು, ಸಾಮಾಜಿಕ ಭದ್ರತೆ, ಜನರ ಆರೋಗ್ಯ, ನೆಲಜಲದ ರಕ್ಷಣೆ, ಪರಿಸರ ಕುರಿತಂತೆ ಯಾವುದೇ ಕಾಳಜಿ ತೋರದೆ ಹೋದದ್ದು ದುರಂತವೇ ಸರಿ. ಕಾಳಜಿಯಂತೂ ಮರೆಯಾಗಿದ್ದೇ ಹೆಚ್ಚು. ಇನ್ನು ದೂರದೃಷ್ಟಿ ಎನ್ನುವುದಂತೂ ಮರೀಚಿಕೆಯೆ ಆಗಿದೆ.
ಈಗಲೂ ಸಾಲಮನ್ನಾ, ಬೆಂಬಲ ಬೆಲೆ, ಬೆಳೆ ವಿಮೆ ಇವೆಲ್ಲವೂ ಬ್ಯಾಂಡೇಜಿನ ಮೇಲೆ ಸವರುತ್ತಿರುವ ಮುಲಾಮಿನಂತಿವೆ. ಗಾಯಕ್ಕೂ ಅದಕ್ಕೂ ಸಂಬಂಧವೆ ಇಲ್ಲ ಎಂಬಂತಿವೆ! ಇನ್ನು ಗಾಯ ಮಾಯುವುದಾದರೂ ಎಂತು? ಈ ಗಾಯ ಮಾಯಬೇಕೆಂತಲೂ ಇಲ್ಲ! ಏಕೆಂದರೆ, ಈ ಗಾಯ ನಾವೇ ಮಾಡಿಕೊಂಡಿದ್ದಲ್ಲವೆ...ಎಮ್ಮೆನ್ಸಿ ನೊಣಗಳಿಗೆ ರಸದೂಟ ಬಡಿಸಬೇಕೆಂದರೆ ಗಾಯದ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುವುದೆ ಹೆಚ್ಚುಗಾರಿಕೆ ಅಲ್ಲವೇ?

No comments:
Post a Comment