ಮೈಲುತುತ್ತು + ಸುಣ್ಣದ ಸರಿಯಾದ ಮಿಶ್ರಣ

ಮೈಲುತುತ್ತು + ಸುಣ್ಣದ ಸರಿಯಾದ ಮಿಶ್ರಣ

ನಮ್ಮಲ್ಲಿ ಹೆಚ್ಚಿನ ರೈತರು ಸ್ವಪ್ರಯೋಗದಲ್ಲಿ ಸ್ವಲ್ಪ ಮುಂದೆ. ಶಿಫಾರಸಿನ ಪ್ರಮಾಣ ಸರಿಯಲ್ಲ. ನಮ್ಮ ಹಿರಿಯರ ಲಗಾಯ್ತಿನಿಂದ ಮಾಡಿಕೊಂಡು ಬಂದಿರುವ ಕ್ರಮವೇ ಸೂಕ್ತ ಎಂದು, ಕೊಳೆರೋಗ ಔಷಧಿಯಾದ ಬೋರ್ಡೋ ದ್ರಾವಣ ತಯಾರಿಸುವಾಗ ಸುಣ್ಣ ಹೆಚ್ಚು ಹಾಕುವುದು, ತುತ್ತೆ ಹೆಚ್ಚು ಹಾಕುವುದು ಮುಂತಾದ ಕ್ರಮ ಅನುಸರಿಸುತ್ತಾರೆ. ನಿಜವಾದ ವಿಜ್ಞಾನ ಹೇಳುವುದರಲ್ಲಿ ಅರ್ಥ ಇದೆ. ತಟಸ್ಥ (ನ್ಯೂಟ್ರಲ್) ಸ್ಥಿತಿಯಲ್ಲಿದ್ದರೆ ಅದರಿಂದ ಹಾನಿ ಉಂಟಾಗಲಾರದು. ಒಂದು ಕಿಲೋ ತುತ್ತಿಗೆ ಗರಿಷ್ಠ ಒಂದು ಕಿಲೋ ಸುಣ್ಣ ಹಾಕಿದಾಗ ರಸಸಾರ (ಧಕ್ಕೆ ಸಹನೆ) 9 ರಿಂದ 10ರ ತನಕ ಹೋಗುತ್ತದೆ. ಅದರಿಂದ ಹೆಚ್ಚು ಅಂದರೆ 1.5 ಕಿಲೋ ತನಕ ಹಾಕಿದರೆ ಅದು 11-12 ತನಕವೂ ಏರಿಕೆಯಾಗುತ್ತದೆ. 3/4 ಕಿಲೋ ಸುಣ್ಣ ಹಾಕಿದರೆ ರಸಸಾರ 8-9 ತನಕ ಹೋಗುತ್ತದೆ. ರಸಸಾರ ಹೆಚ್ಚಾದರೆ ಅದು ಖಾರ. (ಅಲ್ಕಲೈನ್) ಕಡಿಮೆಯಾದರೆ ಹುಳಿ (ಅಸಿಡಿಕ್). ತಟಸ್ಥವಾದರೆ ರುಚಿ. ವೀಳ್ಯದೆಲೆ ಮೆಲ್ಲುವಾಗ ಸುಣ್ಣ ಹೆಚ್ಚಾದಾಗಿನ ಮತ್ತು ಕಡಿಮೆಯಾದಾಗಿನ ಅನುಭವ ಮತ್ತು ಸಮ ಆದಾಗಿನ ಅನುಭವ ಬೇರೆ ಬೇರೆ. ಸಮ ಪ್ರಮಾಣ ಎಂದರೆ ನ್ಯೂಟ್ರಲ್ ಸ್ಥಿತಿ. ಇದು ಸಸ್ಯಗಳಿಗೂ ಅನ್ವಯ. ನಾವು ಸಿಂಪಡಿಸುವ ಸುಣ್ಣ  (ಕ್ಯಾಲಿಯಂ ಹೈಡ್ರಾಕ್ಸೈಡ್) ಮತ್ತು ಕಾಪರ್ ಸಲ್ಫೇಟ್ ಎರಡೂ ಅಗತ್ಯ ಪೋಷಕಾಂಶಗಳು. ಅದನ್ನು ಸಸ್ಯಗಳು ತಮ್ಮ ಹಸಿರು ಭಾಗಗಳ ಮೂಲಕ ಒಳಗೆ ಹೀರಿಕೊಳ್ಳುವತ್ತವೆ. ಒಂದು ವೇಳೆ ಅದು ಆಮ್ಲೀಯ ಅಥವಾ ಕ್ಷಾರೀಯ ಆಗಿದ್ದಲ್ಲಿ ಸ್ವೀಕರಿಸುವಿಕೆಗೆ ಕಷ್ಟವಾಗುತ್ತದೆ. ಅದರಿಂದ ಕಾಯಿಗಳ ಮೇಲೆ, ಎಲೆಗಳ ಮೇಲೆ ಸುಟ್ಟ ಕಲೆಗಳು ಉಂಟಾಗಬಹುದು. ಕೆಲವರು ಅಡಿಕೆಗೆ ಬೋರ್ಡೋ ದ್ರಾವಣವನ್ನು ಸಿಂಪಡಿಸಿದಾಗ ಕಾಯಿಗಳ ಮೇಲೆ ಕಲೆಗಳಾಗುತ್ತವೆ. ಅದು ಬೆಳೆಯುವ ಮುನ್ನ ಉದುರುತ್ತದೆ. ಇದಕ್ಕೆ ಸುಣ್ಣ ಹೆಚ್ಚಾಗುವುದು ಒಂದು ಕಾರಣ. ಸಾಮಾನ್ಯವಾಗಿ ತುತ್ತು ಹೆಚ್ಚು ಹಾಕುವುದು ಕಡಿಮೆ. ತುತ್ತು ಎರಡು ಕಿಲೋ ತನತವೂ ಬಳಕೆ ಮಾಡುವವರಿದ್ದಾರೆ. ಸಿಂಪಡಿಸುವ ಸಮಯದಲ್ಲಿ ಮಳೆ ಇಲ್ಲದಿದ್ದರೆ,ನಂತರ ಕೆಲವು ದಿನ ಮಳೆ ಬಾರದೇ ಇದ್ದರೆ ಅಡಿಕೆ ಕಾಯಿಗಳ ಮೇಲೆ ಸುಟ್ಟ ಗಾಯಗಳಂತ ಕಲೆಗಳಾಗುತ್ತವೆ.
ರೈತರು ಬೋರ್ಡೋ ದ್ರಾವಣವನ್ನು ಸಿಪಡಿಸುವಾಗ ಅದು ಯಾವುದೇ ಬೆಳೆ ಇರಲಿ, ಗುಣಮಟ್ಟದ ಸುಣ್ಣ ಆಗಿದ್ದಲ್ಲಿ ಒಂದು ಕಿಲೋ ಗಿಂತ ಹೆಚ್ಚು ಬಳಕೆ ಮಾಡದಿರಿ. ಕೇವಲ ಕಾಯಿಗಳ ಮೇಲೆ ಅಂಟವುದರಿಂದ ಕೊಳೆ ರೋಗ ಹತೋಟಿಯಾಗುವುದು ಅಲ್ಲ. ಅದು ಕಾಯಿಗಳ ಮೂಲಕ ಅಂಗಗಳು ಹೀರಿಕೊಳ್ಳುವುದರಿಂದ ಕೊಳೆ ರೋಗದ ರೋಗಾಣುವಿನ ಪ್ರವೇಶವನ್ನು ತಡೆಯುತ್ತದೆ. ಬರೇ ಅಂಟುವಿಕೆಯ ಕಾರಣದಿಂದ ಕೊಳೆ ರೋಗಕ್ಕೆ ಕಾರಣವಾದ ಪೈಟೋಪ್ಥೆರಾ ಶಿಲೀಂದ್ರ ದೂರವಾಗವುದಿಲ್ಲ. ರೋಗ ನಿರೋಧಕತೆಗೆ ತಾಂಮ್ರದ ಅಂಶ ಸಸ್ಯದ ಅಂಗದಲ್ಲಿ ಇರಬೇಕು.  ಸಿಂಪಡಿಸುವಾಗ ಕಲಕುತ್ತಾ ಇರಬೇಕು.

Like Facebook page

No comments:

Post a Comment