ಕರಾವಳಿಗೆ ಸೂಕ್ತ ಹಣ್ಣು ರಾಮ ಫಲ/rama phala fruit

rama phala fruit
ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯಾದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ. ನಮ್ಮ ಸುತ್ತ ಮುತ್ತ ಬೆಳೆಯುತ್ತಿರುವ ಕೆಲವು ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿವೆ. ಈಗ ಸಾಂಪ್ರದಾಯಿಕ ಹಣ್ಣುಗಳಿಗೆ ಉತ್ತಮ ಬೇಡಿಕೆಯೂ ಇದೆ.

ಸಾಂಪ್ರದಾಯಿಕ ಹಣ್ಣುಹಂಪಲುಗಳಲ್ಲಿ ಮಾವು, ಸಪೋಟಾದಂತೆ ಸೀತಾಫಲ - ರಾಮಫಲವು ಒಂದು. ಸೀತಾಫಲ ಜಾತಿಯ ಹಣ್ಣುಗಳು ಕಡಿಮೆ ನೀರಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಮಳೆ ಕಡಿಮೆ ಏರುವ ಕಡೆ ಸೀತಾಫಲ ಉತ್ತಮವಾಗಿ ಬೆಳೆದರೆ, ಕರಾವಳಿ ಜಿಲ್ಲೆಗಳ ಮಳೆಗೆ ಸರಿಯಾಗಿ  ಹೊಂದಿಕೆಯಾಗದು.ಇಲ್ಲಿ ಅದನ್ನು ಬೆಳೆಸುವುದು ವ್ಯರ್ಥ ಪ್ರಯತ್ನ.ಅದರ ಬದಲಿಗೆ ರಾಮಫಲ ಎಂಬ ಸೀತಾಫಲ ಜಾತಿಯ ಸಸ್ಯವನ್ನು ಬೆಳೆಸಿ ಉತ್ತಮ ಪಸಲು ಪಡೆಯಬಹುದು.ಇದರ ಸಸ್ಯ ಶಾಸ್ತ್ರೀಯ ಹೆಸರುAnnona reticulate.bullock'heart,wild-sweetsop. bull's  heart,ox-heart   ಎಂಬುದಾಗಿಯೂ ಕರೆಯುತ್ತಾರೆ. ಅನೋನೀಸಿ  ಸೇರಿದ ಫಲ ವೃಕ್ಷ. ಸೀತಾಫಲದಂತೆ ರುಚಿ ಹೊಂದಿದೆ. ಸೀತಾಫಲ ಸಸ್ಯಕ್ಕಿಂತ ದೊಡ್ಡದಾಗಿ (೨೫-೩೦ ಅಡಿ  ತನಕವೂ )ಬೆಳೆಯುತ್ತದೆ. ಅಧಿಕ ಹಣ್ಣುಗಳನ್ನೂ ಕೊಡುತ್ತದೆ.ಆದರೆ ಸೀತಾಫಲದಷ್ಟು ಪ್ರಚಾರವನ್ನು  ಪಡೆದಿಲ್ಲ. ಸೀತಾಫಲಕ್ಕೆ ಹೋಲಿಸಿದರೆ ಈ ಹಣ್ಣಿನಲ್ಲಿ ವೇಸ್ಟೇಜ್ ಕಡಿಮೆ. ಇದರ ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳು ಅಡಕವಾಗಿವೆ. ಇದನ್ನು ಹಾಗೆಯೇ ತಿನ್ನಬಹುದು. ಹಣ್ಣಾದ ಮೇಲೆ ಗೊಂಜಾನ್ನು ಎಳೆದರೆ ಸಿಗುವುದೆಲ್ಲ ತಿನ್ನುವ ತಿರುಳು. ತಿನ್ನುವಾಗ ಬೀಜ ಮಾತ್ರ ಬಿಸಾಡುವಂತದ್ದು. ಜ್ಯುಸ್ ಮಾಡಿಯೂ (ಮಿಲ್ಕ್ ಶೇಕ್ ) ಸೇವಿಸಬಹುದು. ಕತ್ತಿ, ಚಾಕುವಿನಿಂದ ಕೊರೆಯಬೇಕಿಲ್ಲ.

100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳು


ಶಕ್ತಿ 101 ಕ್ಯಾಲೋರಿಗಳು, ಕಾರ್ಬೋ ಹೈಡ್ರೇಟುಗಳು -25 ಗ್ರಾಂ, ಕರಗಬಲ್ಲ ನಾರು -2.4 ಗ್ರಾಂ, ಕೊಬ್ಬು -0.6 ಗ್ರಾಂ, ಪ್ರೋಟೀನು ಬಿ1.7gm ವಿಟಮೀನ್ ಬಿ 3 -3% ವಿಟಮಿನ್ ಬಿ 5-3%,ಮೆಗ್ನೀಶಿಯಂ -5 ಕಬ್ಬಿನಾಂಶ -5%, ಮತ್ತು ಪೋಸ್ಫಾರಸ್-3%, ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.

ಇದು ಮದ್ಯ ಮೆಕ್ಸಿಕೋ ದೇಶದ್ದು ಎನ್ನಲಾಗುತ್ತಿದೆ. ಕರಾವಳಿಯಾದ್ಯಂತ  ಇದನ್ನು ಕಾಣಬಹುದು. ಇದನ್ನು ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದು. ಯಾವುದೇ ರೋಗ ರುಜಿನಗಳು ಇಲ್ಲ. ಆರೋಗ್ಯಕ್ಕೆ ಉತ್ತಮ ಹಣ್ಣು ಆದ ಕಾರಣ ಬೇಡಿಕೆ ಚೆನ್ನಾಗಿದೆ. ನೀರೊತ್ತಾಯ ಇದ್ದಾಗಲೂ ಚೆನ್ನಾಗಿ ಬೆಳೆಯುತ್ತದೆ. ಗೊಬ್ಬರ ನೀರಿಗೆ ಚೆನ್ನಾಗಿ ಸ್ಪಂದಿಸಿ ಅಧಿಕ ಇಳುವರಿಯನ್ನು ನೀಡುತ್ತದೆ. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತಿದ್ದು, ಭಾರತದಲ್ಲಿ ಇದನ್ನು ರಾಮಫಲ ಎಂದು ಕರೆಯುತ್ತಾರೆ.

ತೋಟದ ಬದಿಯಲ್ಲಿ, ನಿರುಪಯುಕ್ತ ಭೂಮಿಯಲ್ಲಿ ಇದನ್ನು ಬೆಳೆಸಿ ಅಂಗಡಿಗೆ ಮಾರಾಟ ಮಾಡಬಹುದು. ಈ ಹಣ್ಣಿನ ಲಭ್ಯತೆ ಇಲ್ಲದ ಕಾರಣ ಸೀತಾಫಲದಂತೆ ಮಾರುಕಟ್ಟೆ ಇಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಸುತ್ತಮುತ್ತ ಇದನ್ನು ಒಳ್ಳೆಯ ಬೆಳೆಗೆ ಮಾರಾಟ ಮಾಡುತ್ತಾರೆ. ಇಂದು ಹಣ್ಣು ವ್ಯಾಪಾರಿಗಳು ಯಾವುದೇ ಹಣ್ಣನ್ನು ಕೊಟ್ಟರೂ ವ್ಯಾಪಾರ ಮಾಡುತ್ತಾರೆ.

No comments:

Post a Comment