![]() |
Greenhouse Tunnel |
ದಾಳಿಂಬೆ ಸಸಿ ಉತ್ಪಾದನೆ
ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹೆಚ್ಚು ದಾಳಿಂಬೆಯಲ್ಲಿ ಅಧಿಕ ಪಸಲು ಪಡೆಯಬೇಕಾದರೆ ಸೂಕ್ತ ಸಸಿಯ ಆಯ್ಕೆ ಮತ್ತು ನಿರ್ದಿಷ್ಟ ಬೇಸಾಯದ ಪದ್ಧತಿ ಅನುಸರಿಸುವುದು ಸೂಕ್ತ.
ದಾಳಿಂಬೆ ಸಸಿಗಳ ಆಯ್ಕೆ;ಸಸಿಗಳನ್ನು ಉತ್ಪಾದನೆ ಮಾಡಲು ದಾಳಿಂಬೆ ಗಿಡದಲ್ಲಿ ಹೆಚ್ಚು ಫಸಲು ಬಿಟ್ಟಿರುವಂತಹ ಕಡ್ಡಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.ಪೆನ್ಸಿಲ್ ಗಾತ್ರದ ಕಡ್ಡಿಗಳನ್ನು ೬ಅಂಗುಲ ಉದ್ದಕ್ಕೆ ಹರಿತವಾದ ಕತ್ತರಿಯಿಂದ ಕತ್ತರಿಸಿಕೊಳ್ಳಬೇಕು ಬೇರು ಬಿಡುವ ಭಾಗಕ್ಕೆ ಬೇರು ಪ್ರಚೋದಕ ರಾಸಾಯನಿಕ (ಸರೆಡೆಕ್ಸ್)ಪುಡಿಯನ್ನು ೧ಇಂಚು ಲೇಪಿಸಿ ಗೊಬ್ಬರ ಮಿಶ್ರಣ ತುಂಬಿದ ಪಾಲಿಥಿನ್ ಚೀಲದಲ್ಲಿ ನಾಟಿ ಮಾಡಿ ನೀರು ಹಾಕಿ ಪಾಲಿಹೌಸ್ನಲ್ಲಿಡಬೇಕು.ಬೇರು ಮತ್ತು ಚಿಗುರು ಬರುವವರೆಗೆ ನೀರು ಹಾಕಿ ನಿರ್ವಹಣೆ ಮಾಡಬೇಕು.
ಬೇಸಾಯದ ಪದ್ಧತಿ;ಪಾಲಿಥೀನ್ ಚೀಲದಲ್ಲಿನ ದಾಳಿಂಬೆ ಸಸಿಯನ್ನು ಭೂಮಿಯಲ್ಲಿ ಹದ ಮಾಡಿದ ಗುಂಡಿಯಲ್ಲಿ ನೆಟ್ಟು,ಬೇಸಾಯದ ಪದ್ದತಿಗಳನ್ನು ಅನುಸರಿಸಿ ನಿರ್ವಹಣೆ ಮಾಡಬೇಕಾಗುತ್ತದೆ.ಸಸಿಯಿಂದ ಒಂದು ಅಡಿ ಎತ್ತರದ ನಂತರಬರುವ ಚಿಗರನ್ನು ಬೆಳೆಯಲು ಬಿಡಬೇಕು.ಒಂದು ಅಡಿ ಕೆಳಗೆ ಬರುವಂತಹ ಚಿಗುರುಗಳನ್ನು ತೆಗೆಯುತ್ತಿರಬೇಕು ದಾಳಿಂಬೆ ಫಸಲು ಪಡೆಯುವುದಕ್ಕಾಗಿ ದಾಳಿಂಬೆ ಗಿಡದಲ್ಲಿ ಎಷ್ಟು ರೆಂಬೆಗಳು ಬೇಕು? ಎಷ್ಟು ಹಣ್ಣುಗಳು ಬೇಕು? ಯಾವ ತಿಂಗಳಲ್ಲಿ ಹಣ್ಣುಗಳು ಬೇಕಾಗುತ್ತದೆ ಎಂಬುದರ ಆದಾರದ ಮೇಲೆ ದಾಳಿಂಬೆ ಗಿಡಗಳ ಕಡ್ಡಿಗಳನ್ನು ಕತ್ತರಿಸಬೇಕು.ಪಾಲಿಹೌಸ್ ಸರ್ವ ಋತುಗಳಲ್ಲಿಯೂ ಸಮ ಪ್ರಮಾಣದ ಹವಾಗುಣವನ್ನು ಒದಗಿಸುವುದರಿಂದ ಪಾಲಿಹೌಸ್ ಕಾಳುಮೆಣಸು ಮತ್ತು ದಾಳಿಂಬೆ ಸಸಿ ತಯಾರಿಸಲು ಸೂಕ್ತವಾಗಿದೆ.
No comments:
Post a Comment