ಅಜೋಲಾದ ಉಪಯೋಗಗಳು


ಅಜೋಲಾ ನೀರಿನ ಮೇಲೆ ತೇಲಾಡಿಕೊಂಡು ಬೆಳೆಯುವ ಝರಿ ಸಸ್ಯ. ಇದರ ಎಲೆಗಳ ರಂಧ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೀಲಿ ಹಸಿರು ಪಾಚಿ ಗುಪಿಗೆ ಸೇರಿದ ಅಣುಜೀವಿಗಳಿರುತವೆ.

ಅಜೋಲಾ ಸಸ್ಯದಲ್ಲಿ ಶೇ. 4ರಿಂದ 5ರಷ್ಟು ಸಾರಜನಕ, ಶೇ. ೦.5ರಿಂದ 1.೦ ರಂಜಕ ಶೇ. 3ರಿಂದ 7 ಪೊಟ್ಯಾಷ್ ,ಸುಣ್ಣ, ಕಬ್ಬಿಣ, ಮ್ಯಾಂಗನೀಸ್,ಮೆಗ್ನಿಶಿಯಂ ಇತ್ಯಾದಿ ಪೋಷಕಾಂಶಗಳಿರುತ್ತವೆ. ಗದ್ದೆಯಲ್ಲಿ ಬೆಳೆಯುವ ಭತ್ತಕ್ಕೆ ಇದೊಂದು ಉತ್ತಮ ಜೈವಿಕ ಗೊಬ್ಬರವಾಗುತ್ತದೆ.

ರಾಜ್ಯದಲ್ಲಿ ಅಜೋಲ್ಲ ಪಿನ್ನಾಟ ಹಾಗು ಅಜೋಲ್ಲ ಮೈಕ್ರೋಫಿಲ್ಲಾ ತಳಿಗಳು ಮಲೆನಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. ಈ ಅಜೋಲಾ ತಳಿಗಳ ಜೊತೆ ಸಹ ಜೀವನ ನಡೆಸುತಿರುವ ನೀಲಿ ಹಸಿರು ಪಾಚಿಗಳೆಂದರೆ ಅನಾಬಿನಾ, ನಾಸ್ಟಾಕ್, ಪ್ಲೇಕೊನಿಮಾ, ಆಸಿಲೇಟೋರಿಯ, ಇತ್ಯಾದಿ. ಅಜೋಲಾವನ್ನು ನೀರಿನ ತೊಟ್ಟಿ, ಕೆರೆಗಳಲ್ಲಿ, ಮತ್ತು ಗದ್ದೆಗಳಲ್ಲೂ ಬೆಳೆಯಲಾಗುತ್ತದೆ.

ಉಪಯೋಗಿಸುವ ವಿಧಾನ

ಪ್ರತೀ ಎಕರೆ ಗದ್ದೆಯಲ್ಲಿ ಬೆಳೆಯುವ ಭತ್ತಕ್ಕೆ 300 ಕಿ.ಗ್ರಾಂ. ಹಸಿರು ಪಾಚಿ ಜೈವಿಕ ಗೊಬ್ಬರದ ಅವಶ್ಯಕತೆಯಿದೆ. ಈ ಕಾರಣದಿಂದ ರೈತರು ತಮಗೆ ಅಗತ್ಯವಿರುವ ಅಜೋಲಾವನ್ನು ಸುಲಭವಾಗಿ ಬೆಳೆದುಕೊಳ್ಳಬಹುದು.

ಒಂದು ಎಕರೆ ಭತ್ತದ ಬೆಳೆಗೆ ಅಗತ್ಯವಿರುವ ಅಜೋಲಾವನ್ನು ಬೆಳೆಯಲು ಒಂದು ಗುಂಟೆ ಪ್ರದೇಶವನ್ನು ಹದ ಮಾಡಿಕೊಂಡು ನಾಲ್ಕು ಬುತ್ತಿ ಸೆಗಣಿ ( 100 ಕಿ.ಗ್ರಾಂ. ) ಹಾಕಿ 3ರಿಂದ 4ಅಂಗುಲ ನೀರು ಮಣ್ಣಿನ ಮೇಲೆ ನಿಲ್ಲುವಂತೆ ಮಾಡಬೇಕು. ನಂತರ 20 ಕಿಲೋ ಅಜೋಲಾ ಸಸಿಗಳನ್ನು ನೀರಿನ ಮೇಲೆ ಹರಡಿದರೆ 2 ವಾರಗಳಲ್ಲಿ ಸಮೃದ್ಧವಾಗಿ ಬೆಳೆದು 300 ಕಿಲೋಗಳಾಗುವಷ್ಟು ಆಗುವುದು.

ಪ್ರತೀ ಎಕರೆಗೆ 300 ಕಿಲೋ ಅಜೋಲಾವನ್ನು ಭತ್ತದ ಪೈರು ನಾಟಿ ಮಾಡುವ ಮುನ್ನ ಗದ್ದೆಯಲ್ಲಿ ನೀರಿನ ಮೇಲೆ ಹರಡಬೇಕು. ಮೂರು ವಾರಗಳಲ್ಲಿ ಅಜೋಲಾ ಚೆನ್ನಾಗಿ ಬೆಳೆಯುತ್ತದೆ. ಭತ್ತದ ಪೈರು ನಾಟಿ ಮಾಡುವುದಕ್ಕೆ ಮೊದಲು ಗದ್ದೆಯಲ್ಲಿ ನೀರನೆಲ್ಲ ಬಸಿದು ಅಜೋಲಾವನ್ನು ಗದ್ದೆಗೆ ಸೇರಿಸಿದರೆ, ಅದು ಮಿಶ್ರಣಗೊಂಡು ಗದ್ದೆಯಲ್ಲಿರುವ ನೀಲಿ ಹಸಿರು ಪಾಚಿಯ ಸಹಾಯದಿಂದ ತನ್ನಲ್ಲಿರುವ ಸಾರಜನಕವನ್ನು ಮಣ್ಣಿಗೆ ಬಿಡುಗಡೆ ಮಾಡುತ್ತದೆ.

ಒಂದುವೇಳೆ ರೈತರಿಗೆ ಅಜೋಲಾ ಬೆಳೆಯಲು ಮೂರು  ವಾರಗಳಲ್ಲಿ ಕಾಲಾವಕಾಶವಿಲ್ಲದಿದ್ದರೆ ಭತ್ತದ ಪೈರನ್ನು ಮೊದಲು ನಾಟಿ ಮಾಡಿ ಪೈರಿನ ಸಾಲುಗಳ ಮದ್ಯದಲ್ಲಿ ಅಜೋಲಾವನ್ನು ಗದ್ದೆಯಲ್ಲಿ ಹರಡಿದರೆ, ಅದು ಪೈರಿನ ಜೊತೆ ಬೆಳೆಯುವುದು.
ಅಜೋಲಾ

ಉಪಯೋಗಗಳು 


  1. ಅಜೋಲಾ ಭತ್ತದ ಕೃಷಿಗೆ ಅಗತ್ಯವಾಗಿ ಬೇಕಾದ ಸಾರಾಜನಕ, ರಂಜಕ, ಪೊಟ್ಯಾಷ್, ಮತ್ತು ಇತರೆ ಪೋಷಕಾಂಶಗಳನ್ನು ಪೂರೈಸುತ್ತದೆ. 
  2. ಅಜೋಲಕ್ಕೆ ತ್ವರಿತವಾಗಿ ಬೆಳೆಯುವ ಶಕ್ತಿಯಿದ್ದು ಇದೊಂದು ಉತ್ತಮವಾದ ಹಸಿರೆಲೆ ಗೊಬ್ಬರವಾಗಿದೆ. ಇದರಿಂದ ಭತ್ತದ ಇಳುವರಿ ಶೇ.10ರಿಂದ 15ರಷ್ಟು ಹೆಚ್ಚಳವಾಗುತ್ತದೆ.
  3. ಅಜೋಲಾವನ್ನು ಸಾವಯವ ಗೊಬ್ಬರವಾಗಿ ಹಣ್ಣು, ತರಕಾರಿ, ಹೂವಿನ ಗಿಡಗಳಿಗೂ ಕೊಡುವುದರಿಂದ ಇಳುವರಿಯಲ್ಲಿ ಹೆಚ್ಚಳವಾಗುವುದು.
  4. ಕಾಂಪೋಷ್ಟ್ ಗೊಬ್ಬರ ತಯಾರಿಕೆಯಲ್ಲಿ ಅಜೋಲಾವನ್ನು ಮಿಶ್ರಣ ಮಾಡಿದರೆ  ಗೊಬ್ಬರದಲ್ಲಿರುವ ಪೌಷ್ಟಿಕತೆ ಹೆಚ್ಚಳವಾಗುತ್ತದೆ.
  5. ಅಜೋಲದಲ್ಲಿ ಶೇ.30ರಷ್ಟು ಪ್ರೋಟೀನಿನ ಪ್ರಮಾಣವಿರುವುದರಿಂದ ಸಾಕು ಪ್ರಾಣಿಗಳಾದ ಧನಕರುಗಳಿಗೆ, ಕೋಳಿಗಳಿಗೆ ಆಹಾರವಾಗಿ ಕೊಡಬಹುದು.

Azolla Seed - Mother Fern - 500g ಅಜೋಲಾದ ಬೀಜ 


Price: ₹ 125.00
https://amzn.to/2RHRwOt


YUVAGREEN Azolla Bed for Azolla Cultivation Green , 12'x4'x1' , 450 GSM

https://amzn.to/2xjktqB

No comments:

Post a Comment