ಬೆಳೆಗಳಿಗೆ ಕಾಡುವ ರಸ ಹೀರುವ ಮೈಟ್ ಮತ್ತು ನಿಯಂತ್ರಣ





ಹೆಚ್ಚಿನ ರೈತರು ತಾವು ಬೆಳೆದ ಬೆಳೆಗೆ ಯಾವುದೋ ಒಂದು ರೋಗ ಬಂದಿದೆ,ಎಲೆ ಮುರುಟಿದೆ,ಎಂದು ಔಷಧಿ ಅಂಗಡಿಯಲ್ಲಿ ಹೋಗಿ ಯಾವುದೋ ಔಷಧಿ  ತಂದು ಸಿಂಪಡಿಸುತ್ತಾರೆ. ಅದು ರೋಗವೋ, ಕೀಟವೋ,ತಿಳಿಯದೆ ಏನೇನೋ ಮಾಡುತ್ತಾರೆ. ಯಾವುದೇ ಔಷಧಿ ಸಿಂಪರಣೆಗೆ ಮುನ್ನ ಅದು ರೋಗವೋ ಕೀಟವೋ ಎಂಬ ತಿಳಿವಳಿಕೆ ಇರಲಿ.
ಎಲ್ಲಾ ತರಹದ ಬೆಳೆಗಳಿಗೂ ರಸ ಹೀರುವ ಮೈಟ್ ಗಳ(ತಿಗಣೆ) ತೊಂದರೆ ಇದೆ. ಕೆಲವೊಂದು ವಾತಾವರಣದ ಅನುಕೂಲತೆಗಳಲ್ಲಿ ಇವುಗಳ ಕಾಟ ಹಚ್ಚುತ್ತದೆ. ಇದು ಅಕಶೇರುಕ  (ಬೆನ್ನು ಮೂಳೆ ರಹಿತ) invertebrate ಗುಂಪಿಗೆ ಸೇರಿದ ಅತೀ ಸಣ್ಣ ಜೀವಿಯಾಗಿದ್ದು ಕೆಲವು ಬರಿಗಣ್ಣಿಗೆ ಕಂಡರೆ ಮತ್ತೆ ಕೆಲವು ಕಾಣಲು ಸಾಧ್ಯವಿಲ್ಲ. ಇವುಗಳಲ್ಲಿ ಸಾವಿರಾರು ಜಾತಿಗಳಿದ್ದು ಕೆಲವು ನಾವು ಬೆಳೆಸುವ ಬೆಳೆಯಲ್ಲಿ ಪರಾವಲಂಬಿಗಳಾಗಿ ತೊಂದರೆ ಕೊಡುತ್ತವೆ. ತೋಟಗಾರಿಕೆ ಬೆಳೆಗಳು,ಕೃಷಿ ಬೆಳೆಗಳು,ವಾಣಿಜ್ಯ ಬೆಳೆಗಳು,ತರಕಾರಿ ಬೆಳೆಬೆಳೆಗಳಲ್ಲಿ ಇವುಗಳ ಕಾಟ ಎಲೆಯಲ್ಲಿ,ಕಾಂಡ,ಹೂವು,ಕಾಯಿಗಳಲ್ಲಿ ಕಂಡುಬರುತ್ತದೆ. ಸಮಾನ್ಯವಾಗಿ ಕಂಡುಬರುವ ಮೈಟ್ಗಳೆಂದರೆ,  pider mites,gall mites,bud mites,rust mites,erinem mites,witches'broom mites,blister mites ಇವು ಸಸ್ಯ ಬೆಳವಣಿಗೆಯನ್ನು ಭಾರೀ ಪ್ರಮಾಣದಲ್ಲಿ ಹತ್ತಿಕ್ಕುತ್ತದೆ. ಇದರ ಚಿಹ್ನೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ನಿವಾರಣೆ ಮಾಡಬೇಕು. ಸ್ಪೈಡರ್ ಮೈಟ್.ನಲ್ಲಿ  5 ಬಗೆಗಿನ. ಮುಖ್ಯವಾಗಿ ಹೂವಿನ ಬೆಳೆಗಳಾದ ಜರ್ಮನಿ, ಗುಲಾಬಿ ಮುಂತಾದವುಗಳಲ್ಲಿ ತರಕಾರಿಗಳಾದ ಬದನೆ,ಮೆಣಸಿನಕಾಯಿಯಲ್ಲಿ ಕಣ್ಣಿಗೆ ಕಾಣದ ಈ ಮೈಟ್ ಗಳು ಎಲೆ ಅಡಿ ಬಾಗದಲ್ಲಿ ಹೂವಿನ,ಕಾಯಿಯ ತೊಟ್ಟಿನಲ್ಲಿ ಧವಸ ಧಾನ್ಯ,ಬೇಳೆ ಕಾಳು ಮುಂತಾದವುಗಳಲ್ಲಿ ಈ ಮೈಟ್ ಗಳು ವಾಸಿಸಿ ರಸ ಹೀರಿ ಗಿಡಗಳನ್ನು ನಿಸ್ತೇಜಗೊಳಿಸುತ್ತದೆ. ಮೈಟ್ ಗಳಿಗೆ 4 ಜೊತೆ ಕಾಲುಗಳಿರುತ್ತವೆ. ಕೆಲವು ಕೆಂಪು ಬಣ್ಣದಲ್ಲಿ,ಮತ್ತೆ ಕೆಲವು ಪಿಂಕ್,ಬಿಳಿ ಬಣ್ಣದಲ್ಲಿ ಇರುತ್ತದೆ.

ಎಲೆಗಳು ಚುರುಟಿದಂತಾಗಿದೆಯೇ?,ಸಹಜವಾಗಿ ಕಾಣುತ್ತಿಲ್ಲವೇ?,ಹರಿತ್ತು ಕ್ಷೀಣಿಸಿದೆಯೇ? ಎಲೆಯ ಅಡಿ ಬಳಗವನ್ನು ಸೂಕ್ಷ್ಮ ವಾಗಿ ಗಮನಿಸಿರಿ. ಎಲೆ ಅಡಿ ಬಾಗದಲ್ಲಿ ಈ ಮೈಟ್ ಗಳು ವಾಸಿಸಿ ರಸ ಹಿರುತ್ತವೆ. ಕೆಲವೊಮ್ಮೆ ಎಲೆಯ ಆಹಾರ ಸರಬರಾಜು ಮಾಡುವ ದಂಟನ್ನು ಕೊರೆಯುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸುವುದೇ ಪ್ರಥಮ ಮಾಡಬೇಕಾದ ಕೆಲಸ. ಯಯಾವುದೋ ಕೀಟಕ್ಕೆ ಯಾವುದೋ ಕೀಟನಾಶಕ ಪರಿಣಾಮಕಾರಿಯಗಲಾರದು. ಮೈಟ್ ನಿಯಂತ್ರಣಕ್ಕೆ ಅದರದ್ದೇ ಆದ ಕೀಟನಾಶಕ ಬಳಕೆ ಮಾಡಬೇಕು.
ಮುರುಟಿದ ಎಲೆಯ ಅಡಿ ಭಾಗವನ್ನು ಗಮನಿಸಿ ಅದರಲ್ಲಿ ಏನಾದರೂ ಗಾಯಗಳಾಗಿವೆಯೇ ಗಮನಿಸಿ. ಯಾವುದಾದರು ಕೀಟ,ಮೊಟ್ಟೆ ಇದೆಯೇ ಎಂದು ಗಮನಿಸಿ. ಬೆರಳಿನ ಮೂಲಕ ಉಜ್ಜಿದಾಗ ಏನಾದರೂ ದ್ರವ ಅಂಟಿ ಕೊಳ್ಳುತ್ತದೆಯೇ ಎಂದು ಗಮನಿಸಿ. ಇದು ಕಾಣಸಿಗದಿದ್ದರೆ ಆ ಭಾಗವನ್ನು ದೊಡ್ಡದಾಗಿ ಕಾಣಿಸಲು ಸಹಾಯಕವಾಗುವ ಮಸೂರದ ಮೂಲಕ ನೋಡಿ. ಆಗ ಮೊಟ್ಟೆ,ಮರಿ ಮತ್ತು ಬೆಳೆದ ಕೀಟದ ಚಲನ ವಲನ ಗೊತ್ತಾಗುತ್ತದೆ. ಸಮಾನ್ಯವಾಗಿ ಪೇಲವದ ಎಲೆ ಅಡಿ ಭಾಗದಲ್ಲಿ ಇಂಥಃ ಕೀಟಗಳು ವಾಸಾವಾಗಿಯೇ ಇರುತ್ತದೆ. ಕಾಯಿಗಳು ಮುರುಟಿಕೊಳ್ಳುವುದೂ ಸಹ ಮೈಟ್ ಸಮಸ್ಯೆಯಿಂದ. ಉದಾಹರಣೆಗೆ ಮುರುಟು ಬದನೆ,ಮೆಣಸು,ಸೌತೆಕಾಯಿಗಳು ಎಳೆಯದಿರುವಾಗ ಆ ಭಾಗಕ್ಕೆ ಮೈಟ್ ಬಾಧಿಸಿ ಆ ಭಾಗವನ್ನು ಮುರುಟುವಂತೆ ಮಾಡುತ್ತದೆ. 
ಇದರ ನಿವಾರಣೆಗೆ ಪರಿಣಾಮಕಾರಿಯಾದ ಮೈಟ್ ನಿಯಂತ್ರಕವನ್ನು ಬಳಕೆ ಮಾಡಬೇಕು. ಡೈಕೋಫೋಲ್,ಹಾಗೆಯೇ ಇನ್ನೂ ಬೇರೆ ಬೇರೆ ಮೈಟ್ ನಿಯಂತ್ರಕ ಕೀಟನಾಶಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದನ್ನು ಸಿಂಪಡಿಸುವಾಗ ಎಲೆ ಅಡಿ ಭಾಗಕ್ಕೆ ಸಿಂಪಡಿಸಿದರೆ ಮಾತ್ರ ಅದು ಫಲಕಾರಿ. ಮೈಟ್ ನಿಯಂತ್ರಣಕ್ಕೆ ಗಂಧಕ ಉತ್ತಮ ಔಷಧಿ. ಮಾರುಕಟ್ಟೆಯಲ್ಲಿ ನೀರಿನಲ್ಲಿ ಕರಗುವ ಗಂಧಕ (ವೆಟ್ಟೆಬಲ್ ಸಲ್ಫರ್ ) ದೊರೆಯುತ್ತದೆ. ಅದನ್ನು ಸಿಂಪರಣೆ ಮಾಡಬಹುದು. ಪ್ರಾರಂಭದಲ್ಲಿ ಗುರುತಿಸುವುದರಿಂದ ನಿಯಂತ್ರಣ ಸಾಧ್ಯ.
ಇದರ ನಿಯಂತ್ರಣಕ್ಕೆ ಪ್ರಕೃತಿಯಲ್ಲೇ ಪರಾವಲಂಬಿ ತಿಗಣೆ  (eriophyoid mites)     ಇದೆ. ಇವುಗಳ ಸಂತತಿ ಹೆಚ್ಚಳವಾಗುವಂತೆ ಮಾಡಿದರೆ ನಿಯಂತ್ರಣ ಸುಲಭ.

No comments:

Post a Comment