ಮಲೆನಾಡಿನಲ್ಲಿ ಕರಿಮೆಣಸಿನ ಬೆಳೆ
ಒಂದು ಕಾಲದಲ್ಲಿ ರೋಗದಿಂದ ನಶಿಸಿ ಹೋಗಿದ್ದ ಮೆಣಸು ಬೆಳೆ.ಈಗ ಮತ್ತೆ ಹಿಂದಿಗಿಂತ ಉತ್ತಮವಾಗಿ ಮೇಲೇಳುತ್ತಿದೆ.ಶಿವಮೋಗ್ಗದ ರಿಪ್ಪನ್ ಪೇಟೆಯ ಓರ್ವ ಉತ್ತಮ ಕರಿಮೆಣಸಿನ ಕೃಷಿಕ.ಅಲ್ಲಿ ಅಡಿಕೆ ಕೃಷಿಗೆ ಹಳದಿ ಎಲೆ ರೋಗ ಹೆಚ್ಚು. ವಿಪರೀತ ಮಳೆಮಳೆಯ ಕಾರಣಕ್ಕೆ ಕೊಳೆ ರೋಗ ಇತ್ಯಾದಿ ನಿರ್ವಹಣೆ ಕಷ್ಟ ಎಂದು ಇವರು ತಮ್ಮಲ್ಲಿನ ಅಡಿಕೆ ಮರಗಳಿಗೆಲ್ಲಾ ಕರಿಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ.ಇದು 8-10 ವರ್ಷ ಹಳೆಯ ಮೆಣಸಿನ ತೋಟ.ಸುಮಾರು 6000 ಅಡಿಕೆಯ ಮರಳಿರುವ ಇವರ ತೋಟದಲ್ಲಿ ಸುಮಾರು 2000 ಅಡಿಕೆ ಮರಗಳಿಗೆಲ್ಲಾ ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಮರಕ್ಕೆ ಸುಮಾರು 30 ಅಡಿಗೂ ಹೆಚ್ಚು ಎತ್ತರಕ್ಕೆ ಬಳ್ಳಿ ಹಬ್ಬಿದೆ. ಒಂದು ಅಡಿಕೆ ಮರಕ್ಕೆ 30-40 ಕಿಲೋ ಹಸಿಮೆಣಸು ದೊರೆತು 5 ಕಿಲೋ ಒಣ ಮೆಣಸು ಪಡೆಯುತ್ತದೆ. ವಾರ್ಷಿಕ ಸರಾಸರಿ 40-50 ಕ್ವಿಂಟಾಲ್ ಒಣ ಮೆಣಸು ಪಡೆಯುತ್ತಾರೆ. ಇತ್ತೀಚೆಗೆ ಸಿಲ್ವರ್ ಓಕ್ ಸಸಿ ನೆಟ್ಟು ಅದಕ್ಕೂ ಬಳ್ಳಿ ಹಬ್ಬಿಸಿದ್ದಾರೆ. ಸುಮಾರು 1000 ದಷ್ಟು ಸಿಲ್ವರ್ ಮರಗಳು. ಅದಕ್ಕೆ 3 ವರ್ಷ ಪ್ರಾಯ. ಕಳೆದ ವರ್ಷ ಅದಕ್ಕೂ ಮೆಣಸಿನ ಬಳ್ಳಿ ನೆಟ್ಟು ಈ ವರ್ಷವ10% ದಷ್ಟರಲ್ಲಿ ಅಲ್ಪಸ್ವಲ್ಪ ಕರೆ ಬಿಟ್ಟವೆ. ಗೊಬ್ಬರವಾಗಿ ತೆಂಗಿನ ನಾರಿನ ಹುಡಿ,ಪ್ರೆಸ್ ಮಡ್,ದನದ ಗೊಬ್ಬರ, ಕುರಿಗೊಬ್ಬರ,ಮಣ್ಣು ಮಿಶ್ರಿತ ಕಂಪೋಸ್ಟ್ ತಯಾರು ಮಾಡುತ್ತಾರೆ. ಬುಡಕ್ಕೆ ಹಾಕುವಾಗ ಟ್ರೈಕೋಡರ್ಮಾ ಮಿಶ್ರಣ ಮಾಡುತ್ತಾರೆ. ಈ ಗೊಬ್ಬರ ನೀರು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಮಣ್ಣು ಸಡಿಲ ಮಾಡುತ್ತದೆ. ಮೆಣಸಿಗೆ ಈ ಗೊಬ್ಬರವನ್ನು ಮಳೆಗಾಲ ಕಳೆಯುವ ಸಮಯದಲ್ಲಿ ಹಾಕಬೇಕು.
ರೋಗ ನಿವಾರಣೆಗೆ ಬೇಕಾದ ಕ್ರಮಗಳನ್ನು ತಪ್ಪದೆ ಮಾಡಬೇಕು ರೋಗವನ್ನು ಕೂಡಲೇ ಗುರುತಿಸಿ ಉಪಚಾರ ಮಾಡಿದರೆ,ಬದುಕಿಸಬಹುದು. ರೋಗ ಬರದಂತೆ ತಡೆಯಲು ವಾತಾವರಣದ ಅನುಕೂಲತೆ ಅತೀ ಪ್ರಾಮುಖ್ಯ.
ನಿರ್ವಹಣೆ:
ಮೇ ತಿಂಗಳಲ್ಲಿ ಮೈಕ್ರೋ ನ್ಯುಟ್ರಿಯೆಂಟ್ ಮತ್ತು ಪೊಟ್ಯಾಶಿಯಂ ನೈಟ್ರೇಟ್ (500 ಮಿಲಿ + 1 ಕಿಲೋ 200 ಲೀ. ನೀರು) ಸಿಂಪರಣೆ ಮಾಡಬೇಕು. ಬೆಳೆ ಕಾಳು ಕೂಡುವ ಹಂತದಲ್ಲಿ ಸಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಪೊಟ್ಯಾಶಿಯಂ ನೈಟ್ರೇಟ್ + ಮೈಕ್ರೋ ನ್ಯುಟ್ರಿಯೆಂಟ್ ಸಿಂಪರಣೆ ಮಾಡಬೇಕು. ಬೇಸಿಗೆಯಲ್ಲಿ ಒಮ್ಮೆ ಮಾರ್ಚ್ ತಿಂಗಳಲ್ಲಿ 19:19:19 ಮತ್ತು ಮೈಕ್ರೋ ನ್ಯುಟ್ರಿಯೆಂಟ್ ಸಿಂಪರಣೆ ಮಾಡಿದರೆ ಒಳ್ಳೆಯದು. ಮೇ ಮೂರನೆಯ ವಾರದಲ್ಲಿ ಸಾಪ್ ಶಿಲೀಂದ್ರ ನಾಶಕ ಸಿಂಪರಿಸಬೇಕು. ನಂತರ ಜೂನ್ ಮೊದಲ ವಾರ,ಆಗಸ್ಟ್ ಮದ್ಯ ಭಾಗದಲ್ಲಿ ಬೋರ್ಡೋ ದ್ರಾವಣವನ್ನು ಎಲೆ ಅಡಿ ಭಾಗ ಮತ್ತು ಬಳ್ಳಿಯ ಭಾಗಗಳಿಗೆಲ್ಲಾ ಬೀಳುವಂತೆ ಸಿಂಪರಿಸಬೇಕು.
ಮಳೆ ನಿಲ್ಲುವ ಸಮಯಕ್ಕೆ ಮೆಣಸಿನ ಬಳ್ಳಿಯ ಬುಕ್ಕ ಮಣ್ಣು ಹಾಕಬೇಕು.
ಈಗಿನ ತಂತ್ರಜ್ಞಾನ ಪ್ರಕಾರ ಮೇಲೆ ಹಬ್ಬಿ ಬೆಳೆಯುವ ಬಳ್ಳಿಯನ್ನು ನೆಡು ಸಾಮಗ್ರಿಯಾಗಿ ಬಳಸಿ ಎರಡೇ ವರ್ಷದಲ್ಲಿ ಫಸಲು ಪಡೆಯಬಹುದು.
ಸಪ್ಟೆಂಬರ್ ತಿಂಗಳ ನಂತರ ಮೇ ವರೆಗೆ ತುದಿ ತುಂಡು ಮಾಡಬಹುದು. ಆ ಬಳ್ಳಿಯನ್ನು ಪಾಲಿಥೀನ್ ಚೀಲಕ್ಕೆ ಊರಿ ಪ್ಲಾಸ್ಟಿಕ್ ಮನೆಯಲ್ಲಿ ಇಟ್ಟು ಸಸಿ ಮಾಡಿ ನಾಟಿಗೆ ಬಳಕೆ ಮಾಡಬಹುದು.

No comments:
Post a Comment