ಬದನೆ ರಾಜ್ಯದ ಪ್ರಮುಖ ತರಕಾರಿ ಬೆಳೆ. ಸ್ಥಳೀಯ ತಳಿಗಳು,ಹೈಬ್ರಿಡ್ ತಳಿ ಹೀಗೆ ಹಲವು ತಳಿಗಳನ್ನು ಬೆಳೆಸಲಾಗುತ್ತಿದ್ದು,ಈ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಎಂದರೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು leucinnodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ ಮತ್ತೆ ಹೆಚ್ಚುತ್ತಾ ಹೆಚ್ಚಿನ ಗಿಡಗಳಿಗೆ ಹಾನಿಯಾಗುತ್ತದೆ. ಕಾಯಿ ಕೊರಕವು ಹಾಗೆ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು ಬರುತ್ತದೆ. ಕೊಯಿದು ನೋಡಿದರೆ ಒಳಗೆ ಹುಳ ಇರುತ್ತದೆ. ಕಾಯಿ ಕೊರಕ ಮತ್ತು ಚಿಗುರು ಕುಡಿ ಕೊರಕಕ್ಕೆ ನಿರೋಧಕ ಶಕ್ತಿ ಪಡೆದ ತಳಿ ಇಲ್ಲ. ಇದನ್ನು ನಿಯಂತ್ರಿಸದೇ ಇದ್ದಲ್ಲಿ ಬೆಳೆಯಲ್ಲಿ ಗಣನೀಯ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ. ಕುಡಿ ಕೊರೆಯುವಾಗ ಹೂ ಮೊಗ್ಗುಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಒಂದು ಹುಳ 4-5 ಕಾಯಿಯನ್ನು ಹಾಳು ಮಾಡುತ್ತದೆ. ಅದೇ ರೀತಿ 1 ಹುಳ ಒಂದು ಕುಡಿ ಕೊರೆದು ಮತ್ತೊಂದಕ್ಕೆ ಹೊಗುತ್ತದದೆ. ಹೀಗೆ 3-4 ಚಿಗುರನ್ನು ಹಾನಿ ಮಾಡುತ್ತದೆ. ಇದು ತನ್ನ ಸುಪ್ತಾವಸ್ಥೆಯನ್ನು ನೆಲದಲ್ಲಿ ಮಾಡುತ್ತದೆ.
ಹೇಗೆ ಬರುತ್ತದೆ?
ಕುಡಿ ಕೊರಕ ಮತ್ತು ಕಾಯಿ ಕೊರಕ ಹುಳು ಉಂಟಾಗಲು ಒಂದು ರೀತಿಯ ಪತಂಗ ಕಾರಣ. ಇದು ಪ್ರದೇಶವಾರು ಬಿಳಿ ಮತ್ತು ಮರದ ಬಣ್ಣದಲ್ಲಿರುತ್ತದೆ. ಈ ಪತಂಗವು ಸಸ್ಯದ ಎಲೆಯ ಮೇಲೆ. ಕುಡಿಯ ಮೇಲೆ, ಕಾಯಿಯ ಮೇಲೆ ಕುಳಿತು ಸುಮಾರು 250 ರಷ್ಟು ಮೊಟ್ಟೆಗಳನ್ನು ಒಂದೊಂದಾಗಿ ಇಡುತ್ತವೆ. 2-5 ದಿನದ ಒಳಗೆ ಅದು ಮರಿಯಾಗುತ್ತದೆ. ಎಲೆಯಲ್ಲಿ ಇಟ್ಟಿದ್ದು ಅಲ್ಲೇ ಮರಿಯಾಗಿ ಎಲೆಯನ್ನು ಭಕ್ಷಿಸುತ್ತದೆ. ಕುಡಿಯಲ್ಲಿ ಇಟ್ಟದ್ದು ಕುಡಿಯ ಯಾವುದಾದರೂ ಎಳೆ ಭಾಗದ ಮೂಲಕ ಒಳ ಸೇರಿ ಅದರ ಒಲ ಭಾಗದ ರಸವನ್ನು ಭಕ್ಷಿಸುತ್ತದೆ. ಇದು ಜನವರಿಯಿಂದ ಮಾರ್ಚ್ ತನಕ ಅತೀ ಹೆಚ್ಚು. ಆದರೂ ಉಳಿದ ಸಮಯದಲ್ಲಿ ಇಲ್ಲ ಎಂದಲ್ಲ.
ಇದರ ನಿಯಂತ್ರಣ:
ರಾಸಾಯನಿಕ ಹತೋಟಿಯಾಗಿ ಇದಕ್ಕೆ ಕಾರ್ಬಾರಿಲ್ ಕೀಟನಾಶಕದ ಶಿಫಾರಸ್ಸು ಮಾಡಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಕೆ-ಒಥ್ರಿನ್, ಏ-cyhalothrin ಥಿಯೋಡಿಕಾರ್ಬ್, (thiodicarb) cypermethrin,ಕ್ಲೋರೋಫೆರಿಫೋಸ್,ಕಾರ್ಬೋಸಲ್ಫಾನ್, lambdracyhalothrin ಮುಂತಾದ ಕೀಟನಾಶಕ ಬಳಕೆ ಮಾಡಬಹುದು. ಇದರಲ್ಲಿ ಕಾರ್ಬೋಸಲ್ಫಾನ್ ಹೆಚ್ಚಿನ ಫಲಿತಾಂಶ ಕೊಡುತ್ತದೆ. ಕಾರ್ಬೋಸಲ್ಫಾನ್ ಕೀಟನಾಶಕ ಹರಳನ್ನು ಸೇರಿಸುವುದರಂದ ನೆಲದಲ್ಲಿ ಅಡಗಿರುವ ಹುಳದ ಪ್ಯೂಪೆಗಳು ನಾಶವಾಗುತ್ತದೆ. ಅದೇ ರೀತಿ ಪ್ಲುಬೆಂಡಿಯಾಮೈಡ್ flubendiamide belt 48 sc ಸಹ ಕೆಲಸ ಮಾಡುತ್ತದೆ. ಬೇವು ಮೂಲದ ಸಸ್ಯ ಜನ್ಯ ಕೀಟನಾಶಕ ವಾದ ಅಜಡಿರಕ್ಟಿನ್ ವಾರಕ್ಕೂಂದಾವರ್ತಿಯಂತೆ ಸಿಂಪರಣೆ ಮಾಡಿಯೂ ಹತೋಟಿ ಸಾದ್ಯ. ಇವೆಲ್ಲ ಕೀಟನಾಶಕಗಳನ್ನು ಬಳಕೆ ಮಾಡಬಹುದೇನೋ ಸರಿ. ಆದರೆ ಇದನ್ನು ಬಳಸಿದ 20-40 ದಿನಗಳ ತನಕ ನಾವು ತಿನ್ನುವ ಕಾಯಿಯಲ್ಲಿ ಉಳಿಕೆ ಅಂಶ ಇರುವ ಕಾರಣ ಇದನ್ನು ಬಳಸುವುದು ಮಾನವ ಆರೋಗ್ಯದ ದೃಷ್ಟಿಯಿಂದ ಕ್ಷೇಮಕರವಲ್ಲ. ಇದರ ಬದಲಿಗೆ ಕೆಲವು ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು.
ಸುರಕ್ಷಿತ ಕ್ರಮ :
ಮೊದಲನೆಯದಾಗಿ ಒಮ್ಮೆ ಬೆಳೆದ ಕಡೆ ಮತ್ತೊಮ್ಮೆ ಬೆಳೆಯಬೇಡಿ. ಅನುಕೂಲ ಇದ್ದರೆ ಬೆಳೆಸುವ ಜಾಗದಲ್ಲಿಮಣ್ಣನ್ನು ಉಳುಮೆ ಮಾಡಿ ತರಗೆಲೆ ಮುಂತಾದ ಕೃಷಿ ತ್ಯಾಜ್ಯಗಳನ್ನು ಹಾಕಿ ಮಣ್ಣನ್ನು ಒಮ್ಮೆ ಬಿಸಿ ಮಾಡಿ. ಅದು ಅಸಾಧ್ಯವಾದರೆ ಮಣ್ಣಿನ ಮೇಲೆ ಪಾಲಿಥೀನ್ ಹಾಳೆ ಹೊದಿಸಿ ಎರಡು ವಾರ ಕಾಲ ಸೋಲರೈಸೇಶನ್ ಮಾಡಬೇಕು. ನಂತರ ನಾಟಿ ಮಾಡಬೇಕು. ನಾಟಿ ಮಾಡುವ ಮೂರು ನಾಲ್ಕು ವಾರಕ್ಕೆ ಮುಂಚೆ ಉಪಚಾರ ಪ್ರಾರಂಭಿಸಬೇಕು.
ಸಸ್ಯ ಬಬೆಳೆಯತ್ತಿದ್ದಾಗ ಮೊದಲಾಗಿ ಈ ಪತಂಗವು ಎಲೆಯಲ್ಲಿ ಬಂದು ಕುಳಿತು ಮೊಟ್ಟೆ ಇಡುತ್ತವೆ. ಆ ಸಮಯದಲ್ಲಿ ಎಲೆಗಳನ್ನು ಸುತ್ತಿ ಅದರಲ್ಲಿ ಹುಳ ಇರುತ್ತದೆ. ಅದನ್ನು ಗಮನಿಸಿದ ತಕ್ಷಣ ಆ ಭಾಗವನ್ನು ತೆಗೆದು ಅದನ್ನು ಬೆಂಕಿಗೆ ಹಾಕಿ ಸುಡಬೇಕು.
ಸಸ್ಯದಲ್ಲಿ ಎಳೆ ಚಿಗುರು ಬಾಡಿ ಒಣಗಿದ್ದು ಕಂಡುಬಂದರೆ ಅದನ್ನು ಕೆಳಭಾಗದಲ್ಲಿ ಎಲ್ಲಿ ತೂತು ಇದೆಯೋ ಅಲ್ಲಿತನಕ ಕತ್ತರಿಸಿ ಹುಳುವನ್ನು ಕಣ್ಣಿನಲ್ಲಿ ಕಂಡು ಅದನ್ನು ಸುಟ್ಟು ನಾಶಮಾಡಬೇಕು. ಅದನ್ನು ಅಲ್ಲೆ ಉಳಿಸಿದರೆ ಅದು ಕಾಯಿಗೆ ಪ್ರಸಾರವಾಗುತ್ತದೆ.
ಈ ಕಾಯಿ,ಮಿಡಿ ಕೊರಕಕ್ಕೆ ಈಗ ಲಿಂಗಾಕರ್ಷಕ ಬೆಲೆಗಳು ಲಭ್ಯವಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮತ್ತು ಕೆಲವು ಖಾಸಗಿ ತಯಾರಕರಲ್ಲಿ ಈ ಫೆರಮೋನು ಟ್ರಾಪುಗಳು ಲಭ್ಯವಿದ್ದು ಇದನ್ನು ಬದನೆ ಬೆಳೆಸುವಾಗ ಗಿಡ ಹಂತದಲ್ಲಿ ಹಾಕಬೇಕು.
ಜೈವಿಕವಾಗಿ ಇದನ್ನು ನಿಯಂತ್ರಿಸಲು ಬ್ಯಾಸಿಅಸ್ ತುರಂಜೆನ್ಸಿಸ್ ಜೈವಿಕ ಕೀಟನಾಶಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದನ್ನು ಬಳಕೆ ಮಾಡಿದರೆ ತಿನ್ನುವವನಿಗೆ ತೊಂದರೆ ಇಲ್ಲ. ಇದನ್ನು ಸಿಂಪಡಿಸಿದರೆ ಮಣ್ಣು ಮತ್ತು ಸಸ್ಯದಲ್ಲಿರುವ ಹುಳುವನ್ನು ಹುಡುಕಿ ಸಾಯಿಸುತ್ತದೆ. ಇದು ಅಪಾಯ ರಹಿತ ಜೈವಿಕ ಕೀಟನಾಶಕ. ಟ್ರೈಕೋಗ್ರಾಮ ಪರತಂತ್ರ ಜೀವಿಯು ಬದನೆಯ ಕುಡಿ ಮತ್ತು ಕಾಯಿ ಕೊರಕ ಹುಳುವನ್ನು ಭಕ್ಷಿಸುತ್ತದೆ. ಇದರ ಮೊಟ್ಟೆಗಳನ್ನು ತಂದು ಹೊಲದಲ್ಲಿ ಬಿಡುವುದರಿಂದ ನೈಸರ್ಗಿಕವಾಗಿ ಈ ಹುಳುವನ್ನು ನಾಶ ಮಾಡಬಹುದು.
ಕಾಯಿ ಕೊರಕ ಮತ್ತು ಕುಡಿ ಕೊರಕ ಬದನೆಯ ಅತೀ ದೊಡ್ಡ ಸಮಸ್ಯೆ ಎಂಬ ಕಾರಣಕ್ಕೆ ಬಿ ಟಿ ಬದನೆಯನ್ನು ಪರಿಚಯಿಸಲಾಗಿದ್ದು ನಮ್ಮ ದೇಶದಲ್ಲಿ ಇದನ್ನು ಬಳೆಸಲು ಅಧಿಕೃತ ಅನುಮತಿ ಇರುವುದಿಲ್ಲ.
ಯಾವಾಗಲೂ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುವುದಾದರೆ ಹೂ ಬಿಡುವ ಸಮಯದ ಒಳಗೆ ಅದನ್ನು ಸಿಂಪಡಿಸಿ ಮುಗಿಸಬೇಕು. ನಂತರ ಸಿಂಪಡಿಸಿದರೆ ಬಳಸುವವನಿಗೆ ಅಪಾಯವಿದೆ.
ಬೆಂಡೆಯ ಕಾಯಿ ಕೊರಕವು ಸಹ ಇದೇ ಹುಳೂವಾಗಿದ್ದು ಅದನ್ನು ಈ ಕ್ರಮದಲ್ಲಿ ನಿಯಂತ್ರಣ ಮಾಡಬಹುದು.

No comments:
Post a Comment