ಸಾಮಾನ್ಯವಾಗಿ ಎಲ್ಲ ರೈತರ ಮನೆಯಲ್ಲೂ ಒಂದಷ್ಟು ಧವಸ ಧಾನ್ಯಗಳ ಸಂಗ್ರಹ ಇದ್ದೇ ಇರುತ್ತದೆ. ಇವುಗಳನ್ನು ಹುಳುಗಳು ಬಾಧಿಸಂದತೆ ರಕ್ಷಿಸಲು ಬೇವಿನ ಬಳಕೆ ಒಂದು ಸೂಕ್ತ ವಿಧಾನ. ಅಕ್ಕಿ,ಜೋಳ, ಬೇಳೆ ಕಾಳುಗಳು ಯಾವುದೇ ಇರಲಿ ಇವುಗಳ ಜತೆಗೆ ಬೇವಿನ ಎಲೆಗಳು ಅಥವಾ ಕಡ್ಡಿ ಸಮೇತ ಚಿಕ್ಕ ಚಿಕ್ಕ ಟೊಂಗೆಗಳನ್ನು ಸೇರಿಸುವುದರಿಂದ ಹುಳು, ಇತರ ಕ್ರಿಮಿ-ಕೀಟಗಳ ಬಾಧೆಯಿರುವುದಿಲ್ಲ. ಎಲೆ ಒಣಗಿ ಹೋದರೆ ಮತ್ತೆ ಹಸಿರೆಲೆಗಳನ್ನು ಬಳಸಬಹುದು.
ಇನ್ನೊಂದು ವಿಧಾನವೂ ಇದೆ. ಇದನ್ನು ಬೆಳೆ ಬೆಳೆಯುವ ಹಂತದಲ್ಲೇ ಮಾಡಬೇಕು. ರಸ್ತೆಯ ಮಣ್ಣು ಮತ್ತು ಕಾಳುಧೂಳನ್ನು 1:1 ಪ್ರಮಾಣದಲ್ಲಿ ಬೆರೆಸಿ ಇದಕ್ಕೆ ಅರ್ಧ ಕೆಜಿಯಷ್ಟು ಬೇವಿನ ಹಿಡಿತವನ್ನು ಪುಡಿಮಾಡಿ ಸೇರಿಸಿ ಭದ್ರಪಡಿಸಿ. ಈ ಮಿಶ್ರಣವನ್ನು ಆಗಾಗ್ಗೆ ಗಿಡಗಳ ಮೇಲೆ ಹಾಕುತ್ತಿದ್ದರೆ ಬೆಳೆಗಳನ್ನು ಹುಳು ಬಾಧಿಸುವುದಿಲ್ಲ. ಬೇವಿನಲ್ಲಿ ಕೀಟನಾಶಕ ಗುಣ ಇರುವುದರಿಂದ ಕ್ರಿಮಿ-ಕೀಟಗಳ ಬಾಧೆಯನ್ನು ಸಮರ್ಥವಾಗಿ ನಿಯಂತ್ರಿಸುತ್ತದೆ.
No comments:
Post a Comment