ಗೌಜುಗನ ಹಕ್ಕಿ ಸಾಕಣೆ



ಗೌಜುಗನ ಹಕ್ಕಿ ಸಾಕಣೆ -ಸರಳ ಉಪ ಕಸುಬು
   ನಾಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳಿಗಿಲ್ಲ. ಸಾಕಿದ ಹಂದಿಯ ಮಾಂಸಕ್ಕಿಂತ ಕಾಡು ಹಂದಿಯ ಮಾಂಸವನ್ನು ಜನ ಹೆಚ್ಚು ಇಚ್ಚೆ ಪಡುತ್ತಾರೆ. ಜನರ ಅಭಿರುಚಿ ತಕ್ಕುದಾಗಿ ಪೂರೈಕೆ ಮಾಡುವ ವ್ಯವಸ್ಥೆ ಇದ್ದರೆ ಅದರಲ್ಲಿ ಲಾಭವಿದೆ.
     
ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಿನ ಅಂಗಡಿಗಳಲ್ಲಿ ಕೋಳಿ ಮೊಟ್ಟೆ ತರಹವೇ ಹಕ್ಕಿಯ ಮೊಟ್ಟೆ ಮಾರಲ್ಪಡುತ್ತದೆ. ಇದು ಆರೋಗ್ಯಕ್ಕೆ ಉತ್ತಮ, ಜ್ಞಾನ ಶಕ್ತಿ ಉತ್ತಮವಾಗುತ್ತದೆ. ಇದು ಬೇರೆ ಯಾವ ಹಕ್ಕಿಯ ಮೊಟ್ಟೆಯು ಅಲ್ಲ. ಅದು ಗೌಜುಗನ ಹಕ್ಕಿಯ ಮೊಟ್ಟೆ. ಪಾರಿವಾಳ ಹಕ್ಕಿಯ ಮಾಂಸದ ರುಚಿಗೆ ಈ ಹಕ್ಕಿ ಮಾಂಸದ ರುಚಿ ಸಮ.
ಅದೇ ರೀತಿ ಅದರ ಮಾಂಸ ಸಹ ಮಾರಾಟಕ್ಕೆ ಲಭ್ಯ. ಇತ್ತೀಚಿನ ದಿನಗಳಲ್ಲಿ ನಾಟಿ ಕೋಳಿ ಸಾಕಾಣೆಗೆ ಹೆಚ್ಚಿನ ಮಹತ್ವ ಬಂದಿದೆ. ಪಕ್ಷಿ ಸಾಕಾಣೆಗೂ ಮಹತ್ವ ಬರಲಾರಂಬಿಸಿದೆ. ಪಕ್ಷಿ ಸಾಕಾಣೆಗೆ ಗೌಜುಗನ ಹಕ್ಕಿ ಉತ್ತಮವಾಗಿ ಹೊಂದುತ್ತದೆ. ಇದರ ಮೊಟ್ಟೆ ಮತ್ತು ಮಾಂಸಕ್ಕೆರಡಕ್ಕೂ ಬೇಡಿಕೆ ಇದ್ದು,ಸಣ್ಣ ಗಾತ್ರದ ಪಕ್ಷಿಯಾಗಿ ಅತೀ ಶೀಘ್ರ ಬೆಳವಣಿಗೆ ಹೊಂದುತ್ತದೆ.

ಸ್ಥಳೀಯವಾಗಿ ನಮ್ಮಲ್ಲಿ ಕಾಡು ಗೌಜುಗನ ಹಕ್ಕಿ ಎಂಬ ಪ್ರಭೇಧ ಇದೆ. ಇದನ್ನು ಲಾವಕ್ಕಿ,ಪುರಲಿ ಹಕ್ಕಿ,ಕಾಡು ಪುರಲಿ ಎಂದು ಕರೆಯುತ್ತಾರೆ. ಇದು ಕಾಡಿನಲ್ಲಿ ವಾಸವಾಗಿರುತ್ತದೆ. ಇದನ್ನು ಮಾರಟಕ್ಕೆ ಸಾಕುವುದು ವನ್ಯ ಜೀವಿ ಕಾಯ್ದೆಯ ಪ್ರಕಾರ ನಿಷೇಧಿತ. ಅದಕ್ಕಾಗಿ ಅದೇ ಪ್ರಭೇಧಕ್ಕೆ ಸೇರಿದ ಜಪಾನೀಸ್ ಗೌಜುಗನ ಹಕ್ಕಿ ಸಾಕಾಣೆಗೆ ಒತ್ತು ಕೊಡಲಾಗಿದೆ. ಇದು ನಮ್ಮ ಕಾಡುಗಳಲ್ಲಿರುವ ಗೌಜುಗನ ಹಕ್ಕಿಗಿಂತ ಸ್ವಲ್ಪ ದೊಡ್ಡದಾಗಿದ್ದು,ಶೀಘ್ರ ಬೆಳವಣಿಗೆ ಮತ್ತು ಹೆಚ್ಚು ಮೊಟ್ಟೆ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಹಕ್ಕಿಯನ್ನು ಮಾಂಸ ಮೊಟ್ಟೆ ಉದ್ದೇಶಕ್ಕಾಗಿ ಪ್ರಪಂಚದಾದ್ಯಂತ ವಾಣಿಜ್ಯವಾಗಿ ಸಾಕಾಣೆ ಮಾಡಲಾಗುತ್ತದೆ. ಇದರ ಮೂಲ ಯುರೋಪ್ ಹಾಗೂ ಏಶಿಯಾ ಖಂಡ.

ವಿಶೇಷತೆಗಳು:
  ನಮ್ಮ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
  ಸಾಕಾಣಿಕೆಗೆ ಕಡಿಮೆ ಬಂಡವಾಳ ಸಾಕಾಗುತ್ತದೆ. 1 ಚದರ ಅಡಿಗೆ 5-6 ಹಕ್ಕಿ ಸಾಕಬಹುದು.
    ಕಡಿಮೆ ಆಹಾರ ಸಾಕು. ಹುಟ್ಟಿದ  7 ವಾರದಲ್ಲಿ ಮೊಟ್ಟೆ ಇಡುವಷ್ಟು ಬೆಳೆಯುತ್ತದೆ. ಒಟ್ಟು 500-600 ಗ್ರಾಂ. ತೂಕ ಬರುತ್ತದೆ. ವರ್ಷಕ್ಕೆ ಮೂರು ನಾಲ್ಕು ಸಂತತಿ ಆಗುತ್ತದೆ. ವರ್ಷಕ್ಕೆ ಹೆಣ್ಣು ಹಕ್ಕಿ 250-280 ಮೊಟ್ಪೆ ಇಡುತ್ತದೆ.
     ಸಾಮಾನ್ಯ ಎಲ್ಲಾ ಪಕ್ಷಿ ರೋಗಗಳಿಗೆ ನಿರೋಧಕ ಶಕ್ತಿ ಹೊಂದಿದೆ. ನಿರ್ವಹಣೆಯ ಶ್ರಮ ಇಲ್ಲ. ಈ ಹಕ್ಕಿಯ ಮಾಂಸವು ಸಾಮಾನ್ಯ ನಾಟಿ ಕೋಳಿಯ ಮಾಂಸದ ರುಚಿಗೆ ಸಮನಾಗಿದೆ.
    ಸಾಕಾಣೆಗೆ ಹೆಚ್ಚು ಬಂಡವಾಳ ಬೇಕಾಗಿಲ್ಲ.

ಗೌಜುಗನ ಹಕ್ಕಿಯ ತಳಿಗಳು:
  ನಮ್ಮ ದೇಶದ ಹಲವಾರು ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಗೌಜುಗನ ಹಕ್ಕಿ ಸಾಕಣೆ ಬಗ್ಗೆ ಸಂಶೋಧನೆ ಕೈಗೊಂಡಿವೆ. ಉತ್ತರ ಪ್ರದೇಶದ ಸೆಂಟ್ರಲ್ ಏವಿಯನ್ ರೀಸರ್ಚ್ ಇನ್ಸ್ಟಿಟ್ಯೂಟ್ ಇವರು 4 ಗೌಜುಗನ ಹಕ್ಕಿಯ ತಳಿ ಅಭಿವೃದ್ಧಿ ಪಡಿಸಿವೆ. ಇದೇ ರೀತಿ ತಮಿಳುನಾಡು ಮತ್ತು ಹೈದರಾಬಾದ್ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಕೆಲವು ತಳಿಗಳನ್ನು ಅಭಿವೃದ್ದಿಪಡಿಸಿವೆ.

ಸಿ ಎ ಆರ್ ಐ - ಉತ್ತಮ್(ಮಾಂಸದ್ದು)
ಸಿ ಎ ಆರ್ ಐ - ಶ್ವೇತಾ
ಸಿ ಎ ಆರ್ ಐ - ಉಜ್ವಲ್
ಸಿ ಎ ಆರ್ ಐ - ಪರ್ಲ್
ನಂದನಮ್ ಕ್ವೇಲ್ 2

ಜಪಾನೀಸ್ ಗೌಜುಗನ ಹಕ್ಕಿಯ ತೂಕ 4-5 ವಾರಕ್ಕೆ  125 ಗ್ರಾಂ ನಿಂದ 190 ಗ್ರಾಂ ತನಕ ಬರುತ್ತದೆ. ದಿನಕ್ಕೆ 25-30 ಗ್ರಾಂ ಆಹಾರ ಬೇಕಾಗುತ್ತದೆ.
ಗೌಜುಗನ ಹಕ್ಕಿಯ ಸಾಕಾಣೆ ನೆರೆಯ ರಾಜ್ಯಗಳಲ್ಲಿ ಇರುವಷ್ಟು ನಮ್ಮ ರಾಜ್ಯದಲ್ಲಿ ಇಲ್ಲ. ಇದನ್ನು ರಾಜ್ಯದ ಎಲ್ಲಾ ಕಡೆ ಸಾಕಾಣೆ ಮಾಡಬಹುದು. ಇತ್ತೀಚೆಗೆ ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಹಕ್ಕಿಯ ಸಾಕಣೆಗೆ ಬೇಕಾದ ಮಾಹಿತಿಯನ್ನು ಕೊಡುತ್ತವೆ.

ಸುಮಾರು 100 ಅಡಿ ಉದ್ದ  30 ಅಡಿ ಅಗಲದ ಮನೆಯಲ್ಲಿ 15000 ಹಕ್ಕಿ ಸಾಕಬಹುದು. ದಪ್ಪ ಸತ್ತೆ ವಿಧಾನದಲ್ಲಿ ಭತ್ತದ ಹೊಟ್ಟು,ಮರದ ಪುಡಿ ಹಾಕಿ ಸಾಕಬಹುದು. ಸಣ್ಣ  1 ಇಂಚು ತೂತಿನ ಜಾಲರಿ ಪಂಜರದಲ್ಲಿ ಸಾಕಬಹುದು. ಮೊದಲ 2 ವಾರ ತನಕ 3:2:1.5 ಅಡಿ ವಿಸ್ತೀರ್ಣದ ಪಂಜರದಲ್ಲಿ 100 ಹಕ್ಕಿಯನ್ನು, 3-6 ವಾರ ಪಂಜರದಲ್ಲಿ 50 ಹಕ್ಕಿಯನ್ನು ಸಾಕಬಹುದು. ಪಂಜರಗಳನ್ನು ಸಾಕಾಣೆಗೆ ಅನುಕೂಲವಾಗುವಂತೆ ಒಂದರ ಮೇಲೆ ಒಂದರಂತೆ ಐದು ಪಂಜರಗಳನ್ನು ಇಡಬಹುದು. ಇದರಿಂದ ಪ್ರತಿನಿತ್ಯ ಹಿಕ್ಕೆ ತೆಗೆದು ಸ್ವಚ್ಚ ಮಾಡಲು ಅನುಕೂಲವಾಗುತ್ತದೆ. ಇದಕ್ಕಾಗಿಯೇ ಕಿರಿದಾದ ಮೇವುಣಿಕೆ, ನೀರುಣಿಕೆ ಲಭ್ಯ ಇದೆ.

ಲಾಭದ ಲೆಕ್ಕಾಚಾರ :
 ಒಂದು ಮರಿಯ ಬೆಲೆ 5ರೂ,ವಿದ್ಯುತ್,ಕೂಲಿ ಹಾಗೂ ಇತರ ವೆಚ್ಚ  5ರೂ. ಆಹಾರ  20ರೂ.
1000 ಹಕ್ಕಿಯ 5 ಅಂತಸ್ತಿನ ಪಂಜರಕ್ಕೆ ವೆಚ್ಚ :30,000 ರೂ.
1000 ಮರಿಗಳಿಗೆ 5ರೂ ನಂತೆ 5000 ರೂ.
ಆಹಾರಕ್ಕೆ ಪ್ರತೀ ಹಕ್ಕಿಗೆ 500 ಗ್ರಾಂ.ನಂತೆ (ಕಿಲೋ 20 ರೂ) 10,000
ಇತರ ವೆಚ್ಚಗಳು ಪ್ರತೀ ಹಕ್ಕಿಗೆ ರೂ.15 =15,000ರೂ ಮಾರಾಟದಲ್ಲಿ ಪ್ರತೀ ಬೆಳೆದ ಹಕ್ಕಿಗೆ 35ರೂ. =35,000

ಲಾಭ:ಒಂದು ಹಕ್ಕಿಯಲ್ಲಿ 5ರೂ. (5-6 ವಾರದಲ್ಲಿ)
(ಗೊಬ್ಬರ, ಮೊಟ್ಟೆ ಲಾಭ ಪ್ರತ್ಯೇಕ )
ಕೋಳಿ ಸಾಕಾಣಿಕೆಯಷ್ಟು ಈ ಹಕ್ಕಿ ಸಾಕಣೆ ಪ್ರಚಲಿತವಾಗಿಲ್ಲದಿದ್ದರೂ ಇನ್ನು ಕಲವೇ ಸಮಯದಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬರಲಿದೆ. ಈ ಪಕ್ಷಿಯ ಮಾಂಸಕ್ಕೆ ಬೇಡಿಕೆ ಬರುವ ಕಾಲವೂ ದೂರವಿಲ್ಲ.

ಗೌಜುಗನ ಹಕ್ಕಿ ಮೊಟ್ಟೆ, ಮರಿಗಳ ಮಾಹಿತಿಗಳು ಪಶು ವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ,ಬೆಂಗಳೂರು. ಇಲ್ಲಿನ ಕುಕ್ಕುಟ ಶಾಸ್ತ್ರ ವಿಭಾಗದಲ್ಲಿ ಲಭ್ಯ.
ಮಂಡ್ಯ ಜಿಲ್ಲೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಪಾನೀಸ್ ಕ್ವೇಲ್ ಹ್ಯಾಚರೀಸ್ ರುದ್ರಾಕ್ಷಿ ಪುರ,ಮದ್ದೂರು ತಾಲೂಕು ಇಲ್ಲಿ ಹಕ್ಕಿಗಳು, ಮೊಟ್ಟೆಗಳು ಮತ್ತು ಮರಿಗಳು ಲಭ್ಯ.
ದೂ:9620377384

5 comments:

  1. ಅತ್ಯಂತ ಉಪಯುಕ್ತ ಮಾಹಿತಿ.

    ReplyDelete
  2. ನಾನು ಹೊಸದಾಗಿ ಕೋಳಿ ಸಾಕಾಣಿಕೆ ಮಾಡುವವನಿದ್ದೇನೆ ಜೊತೆಗೆ ಈ ಹಕ್ಕಿಗಳನ್ನೂ ಸಾಕಲು ಬಯಸಿದ್ದೇನೆ

    ReplyDelete
  3. Send me seller and buyer numbers

    ReplyDelete